ಅತ್ಯಾಚಾರ ದೂರು ಹಿಂಪಡೆಯಲು ಸನ್ಯಾಸಿನಿಗೆ ಆಮಿಷ ಒಡ್ಡಿದ ಪಾದ್ರಿ ವಜಾ!

ಅತ್ಯಾಚಾರ ಆರೋಪಿ ಫಾದರ್ ಜೇಮ್ಸ್ ತಮ್ಮ ವಿರುದ್ಧದ ಅತ್ಯಾಚಾರ ದೂರನ್ನು ಹಿಂಪಡೆಯುವಂತೆ ಸನ್ಯಾಸಿನಿಗೆ ಕರೆ ಮಾಡಿ ಆಮಿಷ ಒಡ್ಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಿರುವನಂತಪುರಂ: ಅತ್ಯಾಚಾರ ಆರೋಪಿ ಫಾದರ್ ಜೇಮ್ಸ್ ತಮ್ಮ ವಿರುದ್ಧದ ಅತ್ಯಾಚಾರ ದೂರನ್ನು ಹಿಂಪಡೆಯುವಂತೆ ಸನ್ಯಾಸಿನಿಗೆ ಕರೆ ಮಾಡಿ ಆಮಿಷ ಒಡ್ಡಿದ್ದಾರೆ. 
ಅತ್ಯಾಚಾರ ದೂರನ್ನು ಹಿಂಪಡೆದರೆ ನಿಮಗೆ ಭೂಮಿ, ಕಟ್ಟಡ ಹಾಗೂ ಭದ್ರತೆ ನೀಡುತ್ತೇನೆ ಎಂದು ಪಾದ್ರಿ ಕೇರಳ ಮೂಲದ ಸನ್ಯಾಸಿನಿಗೆ ಕರೆ ಮಾಡಿ ಆಮಿಷ ಒಡ್ಡಿದ್ದರು. ಈ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಸನ್ಯಾಸಿನಿ ಪೊಲೀಸರಿಗೆ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ. 
ಸನ್ಯಾಸಿನಿಗೆ ಫಾದರ್ ಜೇಮ್ಸ್ ಆಮಿಷ ಒಡ್ಡಿರುವುದು ದುರದೃಷ್ಟಕರ. ಹೀಗಾಗಿ ಅವರನ್ನು ಬಿಷಪ್ ಸ್ಥಾನದಿಂದ ಕೆಳಗಿಳಿಸಿದ್ದೇವೆ ಎಂದು ದಿ ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಯಾಕುಲೇಟ್(ಸಿಎಂಇ) ಸಮೂಹ ಹೇಳಿದೆ. 
46 ವರ್ಷದ ಸನ್ಯಾಸಿನಿ ಜಲಂಧರ್ 2014ರಿಂದ 2016ರವರೆಗೆ 13 ಬಾರಿ ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಿಷಪ್ ವಿರುದ್ಧ ದೂರು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com