ಚೆನ್ನೈ: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ತಮಿಳಿನ ಖ್ಯಾತ ಕಿರುತೆರೆ ನಟಿ ಸಂಗೀತಾ ಅವರನ್ನು ತಮಿಳುನಾಡು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಚೆನ್ನೈ ಹೊರವಲಯದ ರೆಸಾರ್ಟ್ ನಲ್ಲಿ ನಟಿ ಸಂಗೀತಾ ಹಲವು ಯುವತಿಯರನ್ನಿಟ್ಟುಕೊಂಡು ಮಾಸದಂಧೆ ನಡೆಸುತ್ತಿದ್ದರು ಎಂದು ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ. ದಾಳಿ ಹಲವು ಯುವತಿಯರನ್ನು ಕೂಡ ಬಂಧಿಸಲಾಗಿದ್ದು, ಬಂಧಿತ ಯುವತಿಯರ ಪೈಕಿ ಹಲವು ನಟಿಯರೂ ಕೂಡ ಇದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ಮಾಸದಂಧೆಯಲ್ಲಿ ಸಿಕ್ಕಿಬಿದ್ದಿದ್ದ ಮೂವರು ನಟಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಸಂಗೀತಾ ಜೊತೆ ಸುರೇಶ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಮಿಳಿನ ಅನೇಕ ಧಾರವಾಹಿಗಳಲ್ಲಿ ನಟಿಸಿರುವ ಸಂಗೀತಾ, ನಟಿ ರಾಧಿಕಾ ಶರತ್ ಕುಮಾರ್ ಅವರೊಂದಿಗೆ ವಾಣಿ-ರಾಣಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಅಲ್ಲದೆ ಅನೇಕ ಸಿನಿಮಾಗಳಲ್ಲೂ ಸಂಗೀತಾ ಮಿಂಚಿದ್ದರು.
Tamil television actress Sangeetha arrested for allegedly running a prostitution racket at a resort in Chennai. #TamilNadu