ಇಫ್ತಾರ್ ಕೂಟದಲ್ಲಿ ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್ ಭಾಗಿ; 'ಹೌ ಸ್ವೀಟ್' ಎಂದ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾಬೆನ್ ಅಹಮದಾಬಾದ್ ನಲ್ಲಿ ಜೂ. 14 ರಂದು ನಡೆದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು.
ಇಫ್ತಾರ್ ಕೂಟದಲ್ಲಿ ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್ ಭಾಗಿ; 'ಹೌ ಸ್ವೀಟ್' ಎಂದ ಕಾಂಗ್ರೆಸ್
ಇಫ್ತಾರ್ ಕೂಟದಲ್ಲಿ ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್ ಭಾಗಿ; 'ಹೌ ಸ್ವೀಟ್' ಎಂದ ಕಾಂಗ್ರೆಸ್
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾಬೆನ್ ಅಹಮದಾಬಾದ್ ನಲ್ಲಿ ಜೂ. 14 ರಂದು ನಡೆದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು.
ನಗರದ ರಿಲೀಫ್ ರೋಡ್ ಪ್ರದೇಶದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದ ಜಶೋದಾಬೆನ್, ರಂಜಾನ್ ಉಪವಾಸ ಮಾಡುತ್ತಿರುವವರೊಂದಿಗೆ ಮಾತನಾಡಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರ ತವರೂರಾದ ವಡ್ ನಗರದಿಂದ 35 ಕಿಮೀ ದೂರದಲ್ಲಿರುವ ಬ್ರಹ್ಮನ್ವಾಡ ಎಂಬಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಶೋದಾಬೆನ್ ಈಗ ನಿವೃತ್ತರಾಗಿದ್ದಾರೆ. 
ಜಶೋದಾ ಬೆನ್ ಇಫ್ತಾರ್ ನಲ್ಲಿ ಭಾಗಿಯಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ದಿವ್ಯ ಸ್ಪಂದನ (ರಮ್ಯಾ) ಜಶೋದಾಬೆನ್ ಇಫ್ತಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಚಿತ್ರವನ್ನು ರಿಟ್ವೀಟ್ ಮಾಡಿದ್ದು ಹೌ ಸೀಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com