ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದ ತಾಲೀಬಾನ್ ಉಗ್ರನ ಹತ್ಯೆ

ಮಲಾಲಾ ಯೂಸುಫ್ ಝಾಯಿಯನ್ನು ಹತ್ಯೆ ಮಾಡಲು ಗುಂಡಿನ ದಾಳಿ ನಡೆಸಿದ್ದ ತಾಲೀಬಾನ್ ಉಗ್ರನನ್ನು ಅಮೆರಿಕ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.
ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದ ತಾಲೀಬಾನ್ ಉಗ್ರನ ಹತ್ಯೆ
ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದ ತಾಲೀಬಾನ್ ಉಗ್ರನ ಹತ್ಯೆ
ನವದೆಹಲಿ: ಮಲಾಲಾ ಯೂಸುಫ್ ಝಾಯಿಯನ್ನು ಹತ್ಯೆ ಮಾಡಲು ಗುಂಡಿನ ದಾಳಿ ನಡೆಸಿದ್ದ ತಾಲೀಬಾನ್ ಉಗ್ರನನ್ನು ಅಮೆರಿಕ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. 
ಡ್ರೋಣ್ ದಾಳಿಯಲ್ಲಿ ತಾಲೀಬಾನ್ ಉಗ್ರ ಮುಲ್ಲಾ ಫಝಲ್ ನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಅಧಿಕಾರಿ ಜೂ.13 ರಂದು ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಮುಲ್ಲಾ ಫಝಲ್ ನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ. 
2010 ರಿಂದ ಈ ವರೆಗೂ ಮುಲ್ಲಾ ಫಝಲ್ ನ ಹತ್ಯೆ ಕುರಿತು ಕನಿಷ್ಠ 4 ಬಾರಿ ಸುದ್ದಿ ಹರಡಿತ್ತು. ಆದರೆ ಈಗ ಅಮೆರಿಕ ಅಧಿಕಾರಿ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com