ಬಿಬಿಸಿ ಸಂಸ್ಥೆ ನಕಲಿ ಸುದ್ದಿಗಳ ಕುರಿತಂತೆ ’ಬಿಬಿಸಿ ರಿಯಾಲಿಟಿ ಚೆಕ್" ನಂತಹ ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. 2016ರ್ಂದ ಪ್ರಾರಂಭವಾದ ಈ ಜಾಗೃತಿ ಕಾರ್ಯಕ್ರಮ ಟಿವಿ ಹಾಗೂ ಆನ್ ಲೈನ್ ನಲ್ಲಿ ಪ್ರಸಾರ ಕಾಣುತ್ತಿದೆ. "ನಕಲಿ ಸುದ್ದಿ ಒಂದು ದೊಡ್ಡ ಸಮಸ್ಯೆ ಮತ್ತು ಸಾಮಾನ್ಯ ಜನರಿಗೆ ಅವರು ಓದುವ, ನೋಡುವ ಸುದ್ದಿ ನಿಜವೋ, ನಕಲಿಯೋ ತಿಳಿಯುವುದಿಲ್ಲ.ಹೀಗಾಗಿ ಯಾವುದೇ ಸುದ್ದಿಯು ಸತ್ಯವೋ ಇಲ್ಲವೋ ಎನ್ನುವುದನ್ನು ತಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯವಾಗಿದೆ" ಬಿಬಿಸಿ ಗ್ಲೋಬಲ್ ನ್ಯೂಸ್ ಲಿಮಿಟೆಡ್ ಸಿಇಒ ಜಿಮ್ ಈಗನ್ ಹೇಳಿದರು.