ಎಂಎಸ್ಎಂಇ ಕ್ಷೇತ್ರಕ್ಕೆ ಶೀಘ್ರವೇ ಉದ್ಯೋಗ ಪೋರ್ಟಲ್

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗ ಪೋರ್ಟಲ್ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ.
ಎಂಎಸ್ಎಂಇ ಸಚಿವ ಗಿರಿರಾಜ್ ಸಿಂಗ್
ಎಂಎಸ್ಎಂಇ ಸಚಿವ ಗಿರಿರಾಜ್ ಸಿಂಗ್
ನವದೆಹಲಿ: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗ ಪೋರ್ಟಲ್ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. 
ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರ ಉದ್ಯೋಗ ಪೋರ್ಟಲ್ ನ್ನು ಪ್ರಾರಂಭಿಸಲಿದೆ. ಜೂ.27 ರಂದು  ರಾಷ್ಟ್ರೀಯ ಎಂಎಸ್ಎಂಇ ಕಾನ್ಕ್ಲೇವ್ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ವೆಬ್ ಸೈಟ್ ನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಪ್ರತಿಭೆಗಳನ್ನು ಅನ್ವೇಷಿಸಲು ಹಾಗೂ ಸರಿಯಾದ ಅವಕಾಶಗಳನ್ನು ಒದಗಿಸಲು ಈ ವೆಬ್ ಸೈಟ್ ನ್ನು ಪ್ರಾರಂಭಿಸಲಾಗುತ್ತಿದೆ. ಈ ವರೆಗೂ 4.40 ಲಕ್ಷ ಜನರು ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಎಂಎಸ್ಎಂಇ ಕಾರ್ಯದರ್ಶಿ ಅರುಣ್ ಕುಮಾರ್ ಪಾಂಡ ಹೇಳಿದ್ದಾರೆ. 
ಈ ವರೆಗೂ 2,400 ಸಂಸ್ಥೆಗಳು ನಮ್ಮೊಂದಿಗೆ ನೋಂದಣಿ ಮಾಡಿಕೊಂಡಿವೆ, ಅಧಿಕೃತವಾಗಿ ವೆಬ್ ಸೈಟ್ ಲೋಕಾರ್ಪಣೆಗೊಂಡ ಬಳಿಕ, ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ, ತರಬೇತಿ ನೀಡಲು ಈಗಿರುವ 18 ಕೇಂದ್ರಗಳ ಜೊತೆಗೆ ಇನ್ನೂ 15 ಕೇಂದ್ರಗಳು ಪ್ರಾರಂಭವಾಗಲಿವೆ ಎಂದು ಅರುಣ್ ಕುಮಾರ್ ಪಾಂಡ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com