ಟೀ ಮಾರಿ ಈ ಚಾಯ್‌ವಾಲಾ ತಿಂಗಳಿಗೆ ಗಳಿಸುತ್ತಿರುವ ಆದಾಯ ಎಷ್ಟು ಲಕ್ಷ ಗೊತ್ತಾ!

ಪುಣೆ ನಗರದಲ್ಲಿ ಚಾಯ್‌ವಾಲಾ ಒಬ್ಬರು ಟೀ ಮಾರಿ ತಿಂಗಳಿಗೆ 12 ಲಕ್ಷ ಸಂಪಾದಿಸಿ ಸುದ್ದಿಯಾಗಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಪುಣೆ(ಮಹಾರಾಷ್ಟ್ರ): ಪುಣೆ ನಗರದಲ್ಲಿ ಚಾಯ್‌ವಾಲಾ ಒಬ್ಬರು ಟೀ ಮಾರಿ ತಿಂಗಳಿಗೆ 12 ಲಕ್ಷ ಸಂಪಾದಿಸಿ ಸುದ್ದಿಯಾಗಿದ್ದಾರೆ. 
ಪುಣೆ ನಗರದಲ್ಲಿ ಇದೀಗ ಯೆವ್ಲೆ ಟೀ ಹೌಸ್ ಸಖತ್ ಫೇಮಸ್ ಆಗಿದೆ. ನವನಾಥ್ ಯೆವ್ಲೆ ಈ ಟೀ ಹೌಸ್ ನ ಸ್ಥಾಪಕರಾಗಿದ್ದು. ಶೀಘ್ರದಲ್ಲೇ ಇದನ್ನು ಅಂತಾರಾಷ್ಟ್ರೀಯ ಬ್ರಾಂಡ್ ಮಾಡುವುದಾಗಿ ಹೇಳಿದ್ದಾರೆ. 
ದೇಶದಲ್ಲಿ ಪಕೋಡಾ ವ್ಯವಹಾರದಂತೆ, ಚಹಾ ಮಾರಾಟದ ವ್ಯವಹಾರವ ಭಾರತೀಯರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುತ್ತಿದೆ. ಈ ವ್ಯವಹಾರ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ನವನಾಥ್ ಹೇಳಿದ್ದಾರೆ. 
ಪುಣೆ ನಗರದ ಮೂರು ಕಡೆ ಯೆವ್ಲೆ ಟೀ ಹೌಸ್ ಇದ್ದು ಪ್ರತಿಯೊಂದು ಸೆಂಟರ್ ನಲ್ಲೂ 12 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com