ಪತ್ನಿಯನ್ನು ಪ್ರಿಯಕರನಿಗೆ ಧಾರೆಯೆರೆದು ಕೊಟ್ಟು ಆದರ್ಶ ಮೆರೆದ ಪತಿ!

ಪತಿಯೇ ಮುಂದೆ ನಿಂತು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರಿಗೆ ಮರು ಮದುವೆ ಮಾಡಿಸಿರುವ ಘಟನೆ ಇಲ್ಲಿ ನಡೆದಿದೆ.ಸುಂದರ್ ಘರ್ ಜಿಲ್ಲೆ ಬರ್ಗಾನ್ ಬಾರ್ಗೆನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶಾನ್ ಪಾಡ ಹ್ಯಾಮ್ಲೆಟ್ ನಲ್ಲಿ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ರೂರ್ ಕೆಲಾ : ಪತಿಯೇ ಮುಂದೆ ನಿಂತು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರಿಗೆ ಮರು ಮದುವೆ ಮಾಡಿಸಿರುವ ಘಟನೆ ಇಲ್ಲಿ ನಡೆದಿದೆ. ಸುಂದರ್ ಘರ್ ಜಿಲ್ಲೆ ಬರ್ಗಾನ್ ಬಾರ್ಗೆನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶಾನ್ ಪಾಡ ಹ್ಯಾಮ್ಲೆಟ್ ನಲ್ಲಿ ನಡೆದಿದೆ.

ಬಸುದೇವ್ ತೊಪೊ ಎಂಬ ಯುವಕನೊಂದಿಗೆ  21 ವರ್ಷದ ಯುವತಿಯ ವಿವಾಹವಾಗಿತ್ತು,  ಇಬ್ಬರು ಸ್ನೇಹಿತರೊಂದಿಗೆ ತನ್ನ ಸಂಬಂಧಿಕರ ಮನೆಗೆ ತೆರಳಿದ್ದ ಯುವತಿಯ ಪ್ರಿಯಕರ ತನ್ನನ್ನು ದೂರದ ಸಹೋದರ ಎಂದು ಪರಿಚಯಿಸಿಕೊಂಡಿದ್ದಾನೆ. ಮತ್ತಿಬ್ಬರು ಸ್ನೇಹಿತರು ತೊಪೊವನ್ನು ಮದ್ಯಪಾನಕ್ಕೆ ಕರೆದೊಯ್ದಿದ್ದಾರೆ. ಆದರೆ, ಆತ ಹಿಂದುರಿಗಿ ಬಂದಾಗ ಆತನ  ಹೆಂಡತಿ ಹಾಗೂ ಪ್ರಿಯಕರ ಪ್ರಧಾನ್ ಜೊತೆಗಿರುವುದು ಕಂಡುಬಂದಿದೆ. ಈ ಘಟನೆ ನಂತರ ಗ್ರಾಮಸ್ಥರೆಲ್ಲಾ ಸೇರಿ ಪ್ರಧಾನ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ವೇಳೆ ಆ ಯುವತಿ ಪ್ರಧಾನ್ ನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದು, ಕುಟುಂಬದವರ ಒತ್ತಡಕ್ಕೆ ಮಣಿದು ತೊಪೊವನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ನಂತರ ಆ ಯುವತಿಯ ಪೋಷಕರು ಹಾಗೂ ಆಕೆಯ ಪ್ರಿಯಕರನ ಮನೆಯವರು ಕರೆದಿದ್ದಾರೆ. ಗಂಡನೇ ಮುಂದೆ ನಿಂತು ತನ್ನ ಹೆಂಡತಿ ವಿವಾಹ ಮಾಡಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಹೋದರಾದರೂ ಸಂಪ್ರದಾಯಂತೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ 16 ವರ್ಷದ ಬಾಲಕಿಯನ್ನು 32 ವರ್ಷದ ಯುವಕನಿಗೆ ಕೊಟ್ಟು ವಿವಾಹ ಮಾಡಿಸಿರುವ ಘಟನೆ ಜಾರ್ಖಂಡ್ ಜಿಲ್ಲೆಯ ಪಶ್ಚಿಮ ಸಿಂಗಭುಮ್ ಜಿಲ್ಲೆಯಲ್ಲಿ ಮೊನ್ನೆ ನಡೆದಿದೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು  ಆ ಬಾಲಕಿಯನ್ನು ರಕ್ಷಿಸಿದ್ದು  ಮನೆಗೆ ಕರೆತಂದಿದ್ದಾರೆ.

ಆ ಬಾಲಕಿಯ ತಂದೆ  ಹಿರಿಯ ಮಗಳನ್ನು ಕೊಡುವುದಾಗಿ ವ್ಯಕ್ತಿಯೊಬ್ಬರಿಂದ 8 ಸಾವಿರ ಹಣ ಪಡೆದಿದ್ದಾನೆ. ಆದರೆ. ಈ ಮದುವೆಗೆ ಹಿರಿಯ ಮಗಳು ಒಪ್ಪದಿದ್ದಾಗ ಕಿರಿಯ ಮಗಳನ್ನು ಕೊಟ್ಟು ವಿವಾಹ ಮಾಡಲು ಯತ್ನಿಸಿರುವುದಾಗಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com