ಹೈದರಾಬಾದ್: ಆತ್ಮಹತ್ಯೆಯ ಲೈವ್ ರೆಕಾರ್ಡ್ ಮಾಡಿ ಸಾವಿಗೆ ಶರಣಾದ ಐಟಿಐ ವಿದ್ಯಾರ್ಥಿ!

ಪ್ರೇಮ ವೈಫಲ್ಯದಿಂದ ಬೇಸತ್ತ ವಿದ್ಯಾರ್ಥಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವನ್ನು ಲೈವ್ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾ ಸಾವಿಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್: ಆತ್ಮಹತ್ಯೆಯ ಲೈವ್ ರೆಕಾರ್ಡ್ ಮಾಡಿ ಸಾವಿಗೆ ಶರಣಾದ ಐಟಿಐ ವಿದ್ಯಾರ್ಥಿ!
ಹೈದರಾಬಾದ್: ಆತ್ಮಹತ್ಯೆಯ ಲೈವ್ ರೆಕಾರ್ಡ್ ಮಾಡಿ ಸಾವಿಗೆ ಶರಣಾದ ಐಟಿಐ ವಿದ್ಯಾರ್ಥಿ!
Updated on: 
ಹೈದರಾಬಾದ್: ಪ್ರೇಮ ವೈಫಲ್ಯದಿಂದ ಬೇಸತ್ತ ವಿದ್ಯಾರ್ಥಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವನ್ನು ಲೈವ್ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾ ಸಾವಿಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನ ಐಟಿಐ ವಿದ್ಯಾರ್ಥಿಯಾದ ರಾಜಣ್ಣ ಸಿರಿಸೆಲ್ಲಾ ಜಿಲ್ಲೆಯ ಅಜ್ಮೀರ್ ಸಾಗರ್(20) ಆತ್ಮಹತ್ಯೆಗೆ ಶರಣಗಿದ್ದಾನೆ. ಈತ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ಹುಡುಗಿಯೊಬ್ಬಳಿಗೆ ವಾಟ್ಸ್ ಅಪ್ ನಲ್ಲಿ ವಿಡಿಯೋ ಕಾಲ್ ಮಾಡಿದ್ದ.  ಹೈದರಾಬಾದ್ ನ ನವತ್ ನಗರದ ಸರ್ಕಾರಿ ಐಟಿಐ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ವಿನಾಯಕ ನಗರದ ಅಕ್ಕನ ಮನೆಯಲ್ಲಿ ವಾಸವಾಗಿದ್ದ.
ಈತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ, ಇವನ ಪ್ರೇಮ ಪ್ರಸ್ತಾವನೆಯನ್ನು ಆಕೆ ತಿರಸ್ಕರಿಸಿದ್ದಳು. ಅಲ್ಲದೆ ಸಾಗರ್ ಕುಟುಂಬ ಸಹ ಅವನ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದು ಇದರಿಂದ ಬೇಸತ್ತ ಆತ ಸಾವಿಗೆ ಶರಣಾಗಿದ್ದಾನೆ.
ಬುಧವಾರ ಬೆಳಿಗ್ಗೆ 10.45ರ ಸುಮಾರಿಗೆ ಪ್ರೀತಿಸಿದ್ದ ಹುಡುಗಿಗೆ ವೀಡಿಯೋ ಕರೆ ಮಾಡುವಂತೆ ಸಂದೇಶ ಕಳಿಸಿದ್ದಾನೆ. ಆ ವೇಳೆ ಮನೆಯಲ್ಲಿ ತಾನೊಬ್ಬನೇ ಇದ್ದ ಸಾಗರ್ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಅಲ್ಲದೆ ಹಾಗೆ ಹುಡುಗಿಗೆ ವೀಡಿಯೋ ಕಾಲ್ ಮಾಡುವ ಮುನ್ನ ಇನ್ನೊಂದು ಮೊಬೈಲ್ ಅಪ್ಲಿಕೇಷನ್ ನಿಂದ ತಾನು ಸಾಯುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡುವ ವ್ಯವಸ್ಥೆ ಮಾಡಿದ್ದ. ಬಳಿಕ ಹುಡುಗಿಗೆ ಕರೆಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗುರುವಾರ ಮಧ್ಯಾಹ್ನ ಸಾಗರ್ ಗೆ ಅವನ ಅಕ್ಕ ಕರೆ ಮಾಡಿದ್ದಾಗ ಆ ಕರೆಯನ್ನು ಮನೆಯ ಮಾಲೀಕರು ಸ್ವೀಕರಿಸಿದ್ದಾರೆ. ಮಂಗಳವಾರದಿಂದಲೂ ಕರೆ ಮಾಡಿರದ ಸಾಗರ್ ಮನೆಯಲ್ಲಿದ್ದಾನೆಯೇ ಎಂದು ಪರಿಶೀಲಿಸುವ ಸಲುವಾಗಿ ಮನೆಯ ಬಾಗಿಲು ಒಡೆದು ನೋಡಲಾಗಿ ಸೀಲಿಂಗ್ ನಲ್ಲಿ ನೇಣು ಹಾಕಿಕೊಂಡಿದ್ದ ಅಜ್ಮೀರ್ ಸಾಗರ್ ದೇಹ ಕಾಣಿಸಿದೆ.
ಕೋಣೆಯಲ್ಲಿದ್ದ ವಿದ್ಯಾರ್ಥಿಯ ಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.
ಇತ್ತೀಚೆಗೆ ಯುವಕರು ಆತ್ಮಹತ್ಯೆಯನ್ನು ಲೈವ್ ವಿಡಿಯೋ ಮಾಡಿರುವ ಪ್ರಸಂಗಗಳು ಹೆಚ್ಚುತ್ತಿದ್ದು ಫೆ.24ರಂದು ಸಹ ಓರ್ವ ಯುವತಿ ಫೇಸ್ ಬುಕ್ ನಲ್ಲಿನ ಸ್ನೇಹಿತನಿಗೆ ವೀಡಿಯೋ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಾವಿಲ್ಲಿ ನೆನೆಯಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com