ವಿಹೆಚ್'ಪಿಯ ರಾಮ ರಾಜ್ಯ ರಥ ಯಾತ್ರೆಯನ್ನು ಕೂಡಲೇ ನಿಲ್ಲಿಸಿ; ಡಿಎಂಕೆ ನಾಯಕ ಸ್ಟಾಲಿನ್
ತಮಿಳುನಾಡು ರಾಜ್ಯ ಪ್ರವೇಶಿಸುತ್ತಿರುವ ವಿಹೆಚ್'ಪಿ ನಡೆಸುತ್ತಿರುವ ರಾಮ ರಾಜ್ಯ ರಥ ಯಾತ್ರೆಯನ್ನು ತಮಿಳುನಾಡು ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಅವರು ಮಂಗಳವಾರ ಆಗ್ರಹಿಸಿದ್ದಾರೆ...
ವಿಹೆಚ್'ಪಿಯ ರಾಮ ರಾಜ್ಯ ರಥ ಯಾತ್ರೆಯನ್ನು ಕೂಡಲೇ ನಿಲ್ಲಿಸಿ; ಡಿಎಂಕೆ ನಾಯಕ ಸ್ಟಾಲಿನ್
ಚೆನ್ನೈ: ತಮಿಳುನಾಡು ರಾಜ್ಯ ಪ್ರವೇಶಿಸುತ್ತಿರುವ ವಿಹೆಚ್'ಪಿ ನಡೆಸುತ್ತಿರುವ ರಾಮ ರಾಜ್ಯ ರಥ ಯಾತ್ರೆಯನ್ನು ತಮಿಳುನಾಡು ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಅವರು ಮಂಗಳವಾರ ಆಗ್ರಹಿಸಿದ್ದಾರೆ.
ರಾಜ್ಯದ ಕೋಮು ಸೌಹಾರ್ದತೆ ಹಾಗೂ ಶಾಂತಿಗಾಗಿ ರಥ ಯಾತ್ರೆಗೆ ತಮಿಳುನಾಡು ಸರ್ಕಾರ ತಡೆಯೊಡ್ಡಬೇಕೆಂದು ಸ್ಟಾಲಿನ್ ಅವರು ಒತ್ತಾಯಿಸಿದ್ದಾರೆ.
ಅಯೋಧ್ಯೆಯಿಂದ ಹೊರಟಿರುವ ವಿಶ್ವ ಹಿಂದೂ ಪರಿಷತ್'ನ ರಾಮ ರಾಜ್ಯ ರಥವು ಇಂದು ತಮಿಳುನಾಡು ರಾಜ್ಯವನ್ನು ಪ್ರವೇಶಿಸಲಿದೆ. ಈ ಹಿನ್ನಲೆಯಲ್ಲಿ ತಿರುನೆಲೆವೆಲ್ಲಿಯಲ್ಲಿ ಮಾ.23ರವರೆಗೂ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ.
ರಾಮ ರಾಜ್ಯ ರಥ ಯಾತ್ರೆಗೆ ಡಿಎಂಕೆ ಸೇರಿ ಎಂಡಿಎಂಕೆ, ವಿಸಿಕೆ, ನಾಮ್ ತಮಿಳಾರ್ ಕಟ್ಚಿ ಮತ್ತು ಉತರೆ ಇಸ್ಲಾಮಿಕ್ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯಾತ್ರೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಅಗ್ರಹಿಸುತ್ತಿದ್ದಾರೆ.