ವಿಡಿಯೋಕಾನ್-ಐಸಿಐಸಿಐ ಸಾಲ ವಿವಾದ: ದೀಪಕ್ ಕೊಚ್ಚರ್ ವಿರುದ್ಧ ಸಿಬಿಐ ತನಿಖೆ ಆರಂಭ

ವಿಡಿಯೋಕಾನ್ ಸಾಲ ವಿವಾದಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಸಿಇಓ ಚಂದ ಕೊಚ್ಚರ್ ಪತ್ನಿ ದೀಪಕ್ ಕೊಚ್ಚರ್ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ.
ಚಂದ ಕೊಚ್ಚರ್
ಚಂದ ಕೊಚ್ಚರ್
Updated on: 

ನವದೆಹಲಿ: ವಿಡಿಯೋಕಾನ್ ಸಾಲ ವಿವಾದಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಸಿಇಓ ಚಂದ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ.

ವಿಡಿಯೋಕಾನ್ ಸಂಸ್ಥೆಗೆ ಐಸಿಐಸಿಐ ಬ್ಯಾಂಕಿನಿಂದ  3,250 ಕೋಟಿ ರೂಪಾಯಿ ಸಾಲ  ಮಂಜೂರು ಮಾಡಲಾಗಿದ್ದು,   ಈ ಪೈಕಿ ಇನ್ನೂ 2,810 ಕೋಟಿ ರೂಪಾಯಿ ಮರು ಪಾವತಿಸಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ ಕೊಚ್ಚರ್ , ಆಕೆಯ ಪತಿ ದೀಪಕ್ ಕೊಚ್ಚರ್ ಮತ್ತು ವಿಡಿಯೋಕಾನ್ ಸಮೂಹದ ಪ್ರವರ್ತಕ ವೇಣುಗೋಪಾಲ್ ದೊತ್ ವಿರುದ್ಧ ಆರೋಪ ಕೇಳಿಬಂದಿತ್ತು.

2008 ಡಿಸೆಂಬರ್ ತಿಂಗಳಲ್ಲಿ ದೀಪಕ್ ಕೊಚ್ಚರ್ ಹಾಗೂ ದೂತ್ ಜೊತೆಯಾಗಿ ಎನ್ ಆರ್ ಪಿಎಲ್ ಎಂಬ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. ಆದರೆ, 2009ರಲ್ಲಿ ದೂತ್   25 ಸಾವಿರ ಷೇರುಗಳನ್ನು ದೀಪಕ್ ಕೊಚ್ಚರ್ ಅವರಿಗೆ ಹಿಂತಿರುಗಿಸಿ ಆ ಸಂಸ್ಥೆಯಿಂದ ಹೊರಬರುತ್ತಾರೆ.

ಇದಾದ ಒಂದು ವರ್ಷದ ನಂತರ ಸುಪ್ರೀಂ ಎನರ್ಜಿ  ಕಂಪನಿ ದೀಪಕ್ ಕೊಚ್ಚರ್ ಅವರ ಕಂಪನಿಗೆ ಅಕ್ರಮವಾಗಿ 64 ಕೋಟಿ ರೂ ಸಾಲ ನೀಡಿದೆ ಎನ್ ಆರ್ ಪಿಎಲ್ ನ ಬಹುಪಾಲು ಷೇರು ಹೊಂದಿದ್ದ ದೊತ್ ಸುಪ್ರೀಂ ಎನರ್ಜಿ ಕಂಪನಿ ತಮ್ಮ ಪಾಲುದಾರ ಮಹೇಶ್ ಚಂದ್ರ ಪುಲಿಂಗ ಅವರಿಗೆ ಷೇರನ್ನು ವರ್ಗಾಯಿಸುತ್ತದೆ.

ನಂತರ .ಸುಪ್ರೀಂ ಎನರ್ಜಿ ಕಂಪನಿಯಲ್ಲಿನ ಎಲ್ಲ ಷೇರನ್ನು ಮಹೇಶ್ ಚಂದ್ರ ಪುಲ್ಲಿಂಗ 9 ಲಕ್ಷ ರೂಪಾಯಿಗೆ ದೀಪಕ್ ಕೊಚ್ಚರಿಗೆ ಅವರಿಗೆ ವರ್ಗಾಯಿಸುತ್ತಾರೆ.

ಇದಾದ ಆರು ತಿಂಗಳ ನಂತರ ಐಸಿಐಸಿಐ ಬ್ಯಾಂಕಿನಿಂದ ವಿಡಿಯೋಕಾನ್ ಸಮೂಹ 3, 250 ಕೋಟಿ ರೂಪಾಯಿ ಸಾಲ ಪಡೆಯುತ್ತದೆ. ಇದರಲ್ಲಿ ಚಂದ ಕೊಚ್ಚರ್ ಅವರಿಗೆ ಹಿತಾಸಕ್ತಿ ಸಂಘರ್ಘದ ಪ್ರಶ್ನೆಯೂ ಮೂಡಿದೆ.

ಇದಾದ ನಂತರ ಬಾಂಡ್ ಮಾರಾಟದಲ್ಲಿನ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಆರ್ ಬಿಐ  ಐಸಿಐಸಿಐ ಬ್ಯಾಂಕಿನ ಮೇಲೆ 58.9 ಕೋಟಿ ರೂಪಾಯಿಯಷ್ಟು ದಂಡ ವಿಧಿಸಿರುವ ಮಾಹಿತಿಯೂ ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com