ತಾನು ಪ್ರಧಾನಿಯಾಗುವುದಕ್ಕೆ ಸಿದ್ಧ ಎಂದು ಇತ್ತೀಚೆಗೆ ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹೈದರಾಬಾದ್ ಬಿಜೆಪಿ ಮುಖಂಡ ಷಹನವಾಜ್ ಹುಸೇನ್, ರಾಹುಲ್ ಗಾಂಧಿ ಹಗಲು ಕನಸು ಕಾಣುತ್ತಿದ್ದಾರೆ, ಅವರ ಸುಂದರ ಕನಸುಗಳಿಗೆ ನಮ್ಮ ಅಭಿನಂದನೆಗಳು, ಆದರೆ 2024ರ ವರೆಗೆ ಪ್ರಧಾನಿ ಹುದ್ದೆ ಖಾಲಿಯಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.