ಟಿಡಿಪಿ ಕಾರ್ಯಕರ್ತನಿಂದ ನಿರಂತರ ಅತ್ಯಾಚಾರ; ಸಂತ್ರಸ್ತ ಬಾಲಕಿ ಇದೀಗ 3 ತಿಂಗಳ ಗರ್ಭಿಣಿ

ತೆಲುಗು ದೇಶಂ ಪಕ್ಷ(ಟಿಡಿಪಿ)ದ ಕಾರ್ಯಕರ್ತನೊರ್ವ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಆಕೆ ಇದೀಗ ಮೂರು ಗರ್ಭೀಣಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಗುಂಟೂರು(ಆಂಧ್ರಪ್ರದೇಶ): ತೆಲುಗು ದೇಶಂ ಪಕ್ಷ(ಟಿಡಿಪಿ)ದ ಕಾರ್ಯಕರ್ತನೊರ್ವ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಆಕೆ ಇದೀಗ ಮೂರು ಗರ್ಭೀಣಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. 
ಸಂತ್ರಸ್ತ ಬಾಲಕಿ ದಿನನಿತ್ಯ ಪ್ರಜ್ಞೆ ತಪ್ಪಿ ಬೀಳುತ್ತಿದ್ದಳು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಗ ವೈದ್ಯರು ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. 
ಇದರಿಂದ ಗಾಬರಿಗೊಂಡ ಪೋಷಕರು ಬಾಲಕಿಯನ್ನು ಪ್ರಶ್ನಿಸಿದಾಗ ಟಿಡಿಪಿ ಪಕ್ಷದ ಕಾರ್ಯಕರ್ತ ತನ್ನ ಮೇಲೆ ಅತ್ಯಾಚಾರ ನಡೆಸಿದ್ದು ಇದನ್ನು ಯಾರಿಗೂ ಹೇಳದಂತೆ 100 ರುಪಾಯಿ ಕೊಟ್ಟಿದ್ದಾಗಿ ತಿಳಿಸಿದ್ದಾಳೆ. 
ಬಾಲಕಿ ಕುಟುಂಬಕ್ಕೆ ಪರಿಚಿತನಾಗಿದ್ದ 43 ವರ್ಷದ ಆರೋಪಿ ಮಾಬುಬ್ ವಾಲಿ ನೆರೆಹೊರೆಯ ಮನೆಯಲ್ಲಿಯೇ ವಾಸವಾಗಿದ್ದು ತಂಪು ಪಾನೀಯ ನೀಡುವುದಾಗಿ ಹೇಳಿ ನಿತ್ಯ ಅತ್ಯಾಚಾರ ಎಸಗುತ್ತಿದ್ದ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. 
ಸದ್ಯ ಪೊಲೀಸರು ಬಾಲಕಿಯನ್ನು ಗುರಾಜಾಲಾ ಆಸ್ಪತ್ರೆಗೆ ಸೇರಿಸಿದ್ದು ಅಗತ್ಯ ಬಿದ್ದರೆ ಗುಂಟೂರು ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com