ಘಟನೆಯಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನೂ ಹೊಡೆದುರುಳಿಸಲಾಗಿದೆ. ದಕ್ಷಿಣ 24 ಪರ್ಗನಾಸ್ ಜಿಲ್ಲೆಯ ಕುಲ್ತಾಲಿ ಎಂಬ ಪ್ರದೇಶದಲ್ಲಿ ಸಿಪಿಐ ಕಾರ್ಯಕರ್ತನ ಮೇಲೆ ದಾಳಿ ಕೂಡ ನಡೆದಿದ್ದು, ಉತ್ತರ 24 ಪರ್ಗನಾಸ್ ನಲ್ಲಿದ್ದ ಮನೆಗೆ ಕಳೆದ ರಾತ್ರಿ ಬೆಂಕಿ ಹಚ್ಚಿದ ಪರಿಣಾಮ ಸಿಪಿಐ ಕಾರ್ಯಕರ್ತ ಹಾಗೂ ಆತನ ಪತ್ನಿ ಸಜೀವ ದಹನವಾಗಿದ್ದಾರೆಂದು ಹೇಳಲಾಗುತ್ತಿದೆ. ಮುರ್ಶಿದಾಬಾದ್ ನಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟ ಪರಿಣಾಮ ಸ್ಥಳದಲ್ಲಿದ್ದ ಜನರು ಬ್ಯಾಲೆಟ್ ಪೇಪರ್ ಗಳನ್ನು ಎಸೆದು ಮತದಾನ ಕ್ಷೇತ್ರಗಳಿಂದ ದೂರ ಹೋಗಿದ್ದಾರೆ. ಘರ್ಷಣೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಮತದಾನ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.