ದೇಶ

ಗುಜರಾತ್: ಕಳ್ಳತನದ ಆರೋಪಿಸಿ ದಲಿತನನ್ನು ಬಡಿದು ಕೊಂದರು!

ಗುಜರಾತ್: ಕಳ್ಳತನದ ಆರೋಪಿಸಿ ದಲಿತನನ್ನು ಬಡಿದು ಕೊಂದರು!
ಹಲ್ಲೆ ದೃಶ್ಯ
Published On :
ರಾಜ್‌ಕೋಟ್‌: ಕಳ್ಳತನ ಮಾಡಿದ ಆರೋಪದ ಮೇಲೆ ದಲಿತ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಕಟ್ಟಿಹಾಕಿ ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ. 
ಆಟೋಮೊಬೈಲ್ ಫ್ಯಾಕ್ಟರಿಯ ಮಾಲೀಕನ ಆದೇಶದ ಹಿನ್ನೆಲೆಯಲ್ಲಿ ಇಬ್ಬರು ಸೇರಿ 35 ವರ್ಷದ ಮುಕೇಶ್ ವನಿಯಾನನ್ನ ಕಟ್ಟಿ ಹಾಕಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮುಕೇಶ್ ಮೃತಪಟ್ಟಿದ್ದಾನೆ. 
ಮುಕೇಶ್ ವನಿಯಾ ಮತ್ತು ಆತನ ಪತ್ನಿ ಚಿಂದಿ ಆಯುತ್ತಿದ್ದರು. ಫ್ಯಾಕ್ಟರಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಮುಕೇಶ್ ನನ್ನು ಕಟ್ಟಿಹಾಕಿದ್ದಾರೆ. ಈ ವೇಳೆ ಪತ್ನಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ತನ್ನ ಹಳ್ಳಿ ಜನರನ್ನು ಕರೆದುಕೊಂಡು ಬರುವಷ್ಟರಲ್ಲಿ ಮುಕೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. 
ಗುಜರಾತ್ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಈ ವಿಡಿಯೋವನ್ನು ತಮ್ಮ ಟ್ವೀಟರ್ ನಲ್ಲಿ ಹಾಕಿಕೊಂಡಿದ್ದಾರೆ. ದಲಿತ ವ್ಯಕ್ತಿಯಾಗಿರುವ ಮುಕೇಶ್ ನನ್ನು ಕಾರ್ಖಾನೆ ಮಾಲೀಕ ಹೊಡೆದು ಕೊಂದಿದ್ದಾನೆ. ಇದು 2016ರಲ್ಲಿ ನಡೆದ ಊನಾ ಘಟನೆಗಿಂತ ಗಂಭೀರವಾಗಿದೆ. ಅಂದು ಹಸಿವಿನಿಂದ ಗೋಮಾಂಸವನ್ನು ತಿನ್ನುತ್ತಿದ್ದ ದಲಿತರನ್ನು ಹೊಡೆದು ಹಾಕಿದ್ದರು. ಇನ್ನು ಗುಜರಾತ್ ನಲ್ಲಿ ದಲಿತರಿಗೆ ಸುರಕ್ಷತೆ ಇಲ್ಲಾ ಅಂತಾ ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣ ಸಂಬಂಧ ಗುಜರಾತ್ ಪೊಲೀಸರು ಐವರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.