ಸಂತಾ: ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಅಭ್ಯರ್ಥಿ ನಾರಾಯಣ ತ್ರಿಪಾಠಿ ವಿರುದ್ಧ ದೂರು ದಾಖಲಾಗಿದೆ.
ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ತ್ರಿಪಾಠಿ 10 ಸಾವಿರ ರು ಬೆಲೆಯ 1 ರುಪಾಯಿ ನಾಣ್ಯಗಳನ್ನು ಲೋಹದ ಮಡಕೆಯಲ್ಲಿ ಕೆಂಪು ಬಣ್ಣದ ಹೊದಿಕೆ ಹಾಕಿ ಕೊಂಡೊಯ್ಯುತ್ತಿದ್ದರು. ತಮ್ಮ ಕ್ಷೇತ್ರದ ಜನರು ಆಶೀರ್ವದಿಸಿ ತಮಗೆ ಹಣ ನೀಡಿದ್ದಾಗಿ ಅವರು ಘೋಷಿಸಿದ್ದಾರೆ.
ತ್ರಿಪಾಠಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ 125ನೇ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿಸಲಾಗಿದೆ. ನಾನು ಯಾವುದೇ ನೀತಿ ಸಂಹಿತೆ ಉಲ್ಲಂಘಿಸಿಲ್ಲ, ಇದು ಕಾಂಗ್ರೆಸ್ ಪಿತೂರಿ ಎಂದು ತ್ರಿಪಾತಿ ಆರೋಪಿಸಿದ್ದಾರೆ.