ದೀಪಾವಳಿ ದಿನದಂದೇ ಹೀನ ಕೃತ್ಯ: ತಂದೆ ಜತೆ ಮದ್ಯ ಸೇವಿಸಿ ತಂಗಿಯನ್ನೇ ರೇಪ್ ಮಾಡಿದ ಅಣ್ಣ!

19 ವರ್ಷದ ಯುವಕನೊಬ್ಬ ಕುಡಿದು ಬಂದು ದೀಪಾವಳಿ ಹಬ್ಬದಂದೆ ತಂಗಿಯನ್ನು ರೇಪ್ ಮಾಡಿರುವ ಹೀನ ಕೃತ್ಯ ಗುರುಗ್ರಾಮ್ನಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗುರುಗ್ರಾಮ್: 19 ವರ್ಷದ ಯುವಕನೊಬ್ಬ ಕುಡಿದು ಬಂದು ದೀಪಾವಳಿ ಹಬ್ಬದಂದೆ ತಂಗಿಯನ್ನು ರೇಪ್ ಮಾಡಿರುವ ಹೀನ ಕೃತ್ಯ ಗುರುಗ್ರಾಮ್ನಲ್ಲಿ ನಡೆದಿದೆ. 
ದೀಪಾವಳಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ತಂದೆ ಜೊತೆಯಲ್ಲಿ ಚೆನ್ನಾಗಿ ಕುಡಿದ ನಂತರ ಯುವಕ ತನ್ನ ತಂಗಿ ಮಲಗಿದ್ದ ಕೋಣೆಗೆ ಹೋಗಿ ಆಕೆಯನ್ನು ಬಲವಂತವಾಗಿ ಅತ್ಯಾಚರಿಸಿದ್ದಾನೆ. ಬೆಳಗ್ಗೆ 15 ವರ್ಷದ ಅತ್ಯಾಚಾರ ಸಂಸ್ರತ್ರೆ ರಾತ್ರಿ ನಡೆದ ಘಟನೆಯನ್ನು ತನ್ನ ತಂದೆ ಬಳಿ ಹೇಳಿದ್ದಾಳೆ. ಕೂಡಲೇ ತಂದೆ ಮಗಳನ್ನು ಕರೆದುಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. 
ದೂರಿನಲ್ಲಿ ತಂದೆ ನಾನು ಫಕ್ರುನಗರದಲ್ಲಿ ವಾಸವಾಗಿದ್ದು ನನಗೆ ನಾಲ್ಕು ಜನ ಮಕ್ಕಳು. ಮೂವರು ಹೆಣ್ಣುಮಕ್ಕಳು ಓರ್ವ ಮಗ. ನನ್ನ ಹೆಂಡತಿಗೆ ಬುದ್ಧಿ ಭ್ರಮಣೆಯಾಗಿದ್ದು ಆಕೆ ಕೆಲ ವರ್ಷಗಳಿಂದ ಕಾಣೆಯಾಗಿದ್ದಾಳೆ. ನಿನ್ನೆ ರಾತ್ರಿ ದೀಪಾವಳಿ ಸಂಭ್ರಮಾಚರಣೆ ಬಳಿಕ ನಾನು ನನ್ನ ಮಗ ಜೊತೆಯಲ್ಲಿ ಕುಳಿತು ಮದ್ಯಪಾನ ಮಾಡಿದ್ದೇವು. ನಂತರ ಆತ ತನ್ನ ತಂಗಿ ಮಲಗಿದ್ದ ಕೋಣೆಗೆ ಹೋಗಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ದೂರಿದ್ದಾರೆ. 
ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com