ಮುಂಬೈ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮುಖಂಡ ಜಿತೇಂದ್ರ ಅಹ್ವಾಡ್ ಅವರು ಶನಿವಾರ ಹೇಳಿದ್ದಾರೆ.
ಶರದ್ ಪವಾರ್ ಪುಣೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದ ಅಹ್ವಾಡ್ ಅವರು, ಎನ್ ಸಿಪಿ ಮುಖ್ಯಸ್ಥ 2014ರಲ್ಲೇ ತಾವು ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ನಾನು 2019ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನನ್ನು ಅಭ್ಯರ್ಥಿ ಎಂದು ಪರಿಗಣಿಸದಂತೆ ಪಕ್ಷಕ್ಕೆ ಪವಾರ್ ಅವರೇ ಸೂಚಿಸಿದ್ದಾರೆ. ಅಲ್ಲದೆ ಇಂದಿನ ಪಕ್ಷದ ಸಭೆಯಲ್ಲೂ ಅವರು ಯಾರೂ ತಮ್ಮ ಹೆಸರು ಪ್ರಸ್ತಾಪಿಸದಂತೆ ಕೇಳಿಕೊಂಡಿದ್ದಾರೆ ಎಂದು ಎನ್ ಸಿಪಿ ಶಾಸಕ ಜಿತೇಂದ್ರ ಅಹ್ವಾಡ್ ಅವರು ಹೇಳಿದ್ದಾರೆ.