ಎರಡು ಕೊಲೆ ಪ್ರಕರಣಗಳಲ್ಲಿ ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಜೀವಾವಧಿ ಶಿಕ್ಷೆ

ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಹರಿಯಾಣದ ಹಿಸ್ಸಾರ್ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ...
ರಾಮ್‌ಪಾಲ್‌
ರಾಮ್‌ಪಾಲ್‌
ಹಿಸ್ಸಾರ್: ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಹರಿಯಾಣದ ಹಿಸ್ಸಾರ್ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 
2014ರ ನವೆಂಬರ್ 8ರಂದು ಬರ್ವಾಲದ ಸತ್ಲೋಕ್ ಆಶ್ರಮದಲ್ಲಿ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವು ಹಾಗೂ 2014ರ ನವೆಂಬರ್ 19ರಂದು ರಾಮ್‌ಪಾಲ್‌ನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಉಂಟಾದ ಗಲಭೆಯಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸಾವಿಗೀಡಾದ ಪ್ರಕರಣ ಸಂಬಂಧ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಡಿಆರ್ ಚಾಲಿಯಾ ಅವರು ತೀರ್ಪು ನೀಡಿದ್ದಾರೆ.
ರಾಮ್‌ಪಾಲ್‌ ವಿರುದ್ಧ ಕೊಲೆ, ಕೊಲೆಗೆ ಯತ್ನ, ಪಿತ್ತೂರಿ, ಅಕ್ರಮವಾಗಿ ಶಸ್ತ್ರಾಸ್ತ್ರ ಶೇಖರಣೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳು ದಾಖಲಾಗಿದ್ದವು. ಇಂದಿನ ತೀರ್ಪಿನಿಂದ ಗಲಭೆ ಉಂಟಾಗಬಹುದೆಂದು ಪೊಲೀಸರು ಎಲ್ಲಡೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com