ಆಧಾರ್ ದೃಢೀಕರಣ ಮೂಲಕ ಪಡೆದಿರುವ ಸಿಮ್ ಕಾರ್ಡ್ ಗಳಿಗೆ ಯಾವುದೇ ಸಮಸ್ಯೆಗಳಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ

ಈಗಾಗಲೇ ಆಧಾರ್ ಕಾರ್ಡ್ ದಾಖಲಾತಿಗಳ ಮೂಲಕ ಪಡೆದಿರುವ ಸಿಮ್ ಕಾರ್ಡ್ ಗಳಿಗೆ ಯಾವುದೇ ಸಮಸ್ಯೆಗಳಿಲ್ಲ.
ಆಧಾರ್ ದೃಢೀಕರಣ ಮೂಲಕ ಪಡೆದಿರುವ ಸಿಮ್ ಕಾರ್ಡ್ ಗಳಿಗೆ ಯಾವುದೇ ಸಮಸ್ಯೆಗಳಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ
ಆಧಾರ್ ದೃಢೀಕರಣ ಮೂಲಕ ಪಡೆದಿರುವ ಸಿಮ್ ಕಾರ್ಡ್ ಗಳಿಗೆ ಯಾವುದೇ ಸಮಸ್ಯೆಗಳಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ
ನವದೆಹಲಿ: ಈಗಾಗಲೇ ಆಧಾರ್ ಕಾರ್ಡ್ ದಾಖಲಾತಿಗಳ ಮೂಲಕ ಪಡೆದಿರುವ ಸಿಮ್ ಕಾರ್ಡ್ ಗಳಿಗೆ ಯಾವುದೇ ಸಮಸ್ಯೆಗಳಿಲ್ಲ. ಒಂದು ವೇಳೆ ಬಳಕೆದಾರರು ಆಧಾರ್ ಕಾರ್ಡ್ ಬದಲಾಗಿ ಬೇರೆ ದಾಖಲೆಗಳನ್ನು ನೀಡುವುದಿದ್ದರೆ ಅದು ವೈಯಕ್ತಿಕ ಆಯ್ಕೆಯಾಗಿರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 
ಹೊಸ ಸಿಮ್ ಕಾರ್ಡ್ ಗಳನ್ನು ಪಡೆಯುವವರಿಗೆ ಆಧಾರ್ eKYC ದೃಢೀಕರಣ ಮಾಡುವುದು ಕಡ್ಡಾಯವಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಆಧಾರ್ eKYC ದೃಢೀಕರಣ  ಹಳೆಯ ಸಿಮ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸುವಂತೆ ಯಾವುದೇ ಸೂಚನೆಯೂ ಇಲ್ಲವಾದ ಕಾರಣ ಹಳೆಯ ಸಿಮ್ ಕಾರ್ಡ್ ಗಳಿಗೆ ಸಮಸ್ಯೆ ಇರುವುದಿಲ್ಲ. ಹಳೆಯ ಬಳಕೆದಾರರು ಆಧಾರ್ ಕಾರ್ಡ್ ಬದಲಾಗಿ ಬೇರೆ ದಾಖಲೆಗಳನ್ನು ನೀಡುವುದಿದ್ದರೆ ಅದು ವೈಯಕ್ತಿಕ ಆಯ್ಕೆಯಾಗಿರಲಿದೆ ಎಂದು ಟೆಲಿಕಾಂ ಇಲಾಖೆ ಹಾಗೂ ಯುಐಡಿಎಐ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com