ಅಮೃತ್‌ಸರ್‌ದಲ್ಲಿ ದಸರಾ ಪ್ರಯುಕ್ತ ರಾವಣ ಪ್ರತಿಕೃತಿ ದಹನವನ್ನು ಮಾಡಲಾಗುತ್ತಿತ್ತು. ಇದನ್ನು ಕಾಣಲು ನೂರಾರು ಮಂದಿ ಸ್ಧಳದಲ್ಲಿ ಬೀಡುತ್ತಿದ್ದರು. ಇನ್ನು ಅನೇಕರು ರೈಲಿನ ಹಳಿ ಮೇಲೆ ನಿಂತಿದ್ದು ರೈಲು ಬಂದಿದ್ದು ಗಮನಿಸಲಿಲ್ಲ. ಈ ವೇಳೆ ರೈಲು ನಿಲ್ದಾಣದಲ್ಲಿ ನೆರೆದಿದ್ದವರ ಮೇಲೆ ರೈಲು ಹರಿದಿದ್ದು ಸದ್ಯ 50 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ದುರಂತದಲ್ಲಿ ಹಲವು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ನೂರರ ಗಡಿ ದಾಟಬಹುದು.