ಮಧ್ಯಪ್ರದೇಶ: 7 ವರ್ಷದ ಪುತ್ರನ ಎದುರು ಮಗನಿಂದ ತಾಯಿಯ ಅತ್ಯಾಚಾರ

ಮಧ್ಯಪ್ರದೇಶ ರಾಜ್ಯದ ಬರ್ವಾನಿ ಜಿಲ್ಲೆಯ ಸುರಾನಿ ಎಂಬ ಹಳ್ಳಿಯಲ್ಲಿ 30 ವರ್ಷದ ಮಗನೊಬ್ಬ 45 ವರ್ಷದ ತನ್ನ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Updated on: 

ಮಧ್ಯಪ್ರದೇಶ :ಮಧ್ಯಪ್ರದೇಶ  ರಾಜ್ಯದ  ಬರ್ವಾನಿ ಜಿಲ್ಲೆಯ ಸುರಾನಿ ಎಂಬ  ಹಳ್ಳಿಯಲ್ಲಿ 30 ವರ್ಷದ ಮಗನೊಬ್ಬ  45 ವರ್ಷದ ತನ್ನ  ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಕಲಾಂಗ ಚೇತನ ಪತಿಯಿಂದ ದೂರವಾಗಿರುವ ತಾಯಿ ಮನೆಯಲ್ಲಿ ಮಲಗಿರುವಾಗ ಸೆಪ್ಟೆಂಬರ್ 2 ರಂದು ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು  ಹೇಳಿದ್ದಾರೆ.

ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಆರೋಪಿ, ತನ್ನ ತಾಯಿಯನ್ನು ಬಲವಂತಾಗಿ  ಒತ್ತಾಯಿಸಿದ್ದಾನೆ.  ಆಕೆ  ಪ್ರತಿರೋಧಿಸಿದಾಗ ಆಕೆಯ  ಕುತ್ತಿಗೆ ಮೇಲೆ  ಕುಡಗೋಲು ಹಾಕಿ  ಅತ್ಯಾಚಾರ ಮಾಡಿದ್ದಾನೆ ಎಂದು  ಸೆಂದ್ವಾ ಗ್ರಾಂ ಠಾಣೆ ಅಧಿಕಾರಿ ದಿನೇಶ್ ಚೌಹ್ಹಾಣ್ ಹೇಳಿದ್ದಾರೆ.

ಬಂಧಿತ ಆರೋಪಿ ಹೆಂಡತಿಯಿಂದ ದೂರವಾದ ನಂತರ ಎರಡು ವರ್ಷದಿಂದ  ತನ್ನ ಕುಟುಂಬದವರೊಂದಿಗೆ ವಾಸಿಸುತ್ತಿದ್ದ. ಈ ಘಟನೆಯನ್ನು ಆತನ ಏಳು ವರ್ಷದ ಮಗನೇ ನೋಡಿದ್ದಾನೆ. ಆದರೆ , ಭಯದಿಂದ ಏನನ್ನೂ ಹೇಳುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಾಪಿ ಮಗನಿಂದ ಹೇಗೊ ತಪ್ಪಿಸಿಕೊಂಡ ತಾಯಿ ತನ್ನ ಮೂವರು ಮೊಮ್ಮಕ್ಕಳೊಂದಿಗೆ ಹತ್ತಿರದ ಜಮೀನಿನ ಬಳಿಗೆ ಓಡಿಹೋಗಿದ್ದು, ಮಾರನೇ ದಿನ ತನ್ನ ಸಂಬಂಧಿಕರೊಂದಿಗೆ ಘಟನೆ ವಿವರಿಸಿದ್ದು, ಅವರು ದೂರು ನೀಡಿರುವುದಾಗಿ ಚೌಹ್ಹಾಣ್ ತಿಳಿಸಿದ್ದಾರೆ.
ಬಂಧಿತ ಆರೋಪಿ ವಿರುದ್ಧ ಐಪಿಸಿ  ಕಲಂ 376  ( ಅತ್ಯಾಚಾರಕ್ಕೆ ಶಿಕ್ಷೆ ) ಹಾಗೂ 506 ( ಅಪರಾಧ ಉದ್ದೇಶ ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com