ಭಾರತ ಎಂದಿಗೂ ಬಂದ್ ಆಗಲ್ಲ, ಸದಾಕಾಲ ಪ್ರಗತಿ ಸಾಧಿಸಲಿದೆ: 'ಭಾರತ್ ಬಂದ್' ಕುರಿತು ಬಿಜೆಪಿ

ಭಾರತ ಎಂದಿಗೂ ಬಂದ್ ಆಗುವುದಿಲ್ಲ. ದೇಶ ಸದಾಕಾಲ ಮುನ್ನಡೆಯಲಿದ್ದು, ಪ್ರಗತಿ ಸಾಧಿಸಲಿದೆ ಎಂದು ವಿರೋಧ ಪಕ್ಷಗಳ ಭಾರತ್ ಬಂದ್ ಕುರಿತು ಬಿಜೆಪಿ ಸೋಮವಾರ ಹೇಳಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಭಾರತ ಎಂದಿಗೂ ಬಂದ್ ಆಗುವುದಿಲ್ಲ. ದೇಶ ಸದಾಕಾಲ ಮುನ್ನಡೆಯಲಿದ್ದು, ಪ್ರಗತಿ ಸಾಧಿಸಲಿದೆ ಎಂದು ವಿರೋಧ ಪಕ್ಷಗಳ ಭಾರತ್ ಬಂದ್ ಕುರಿತು ಬಿಜೆಪಿ ಸೋಮವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು, ಭಾರತ ಎಂದಿಗೂ ಬಂದ್ ಆಗುವುದಿಲ್ಲ. ದೇಶ ಸದಾಕಾಲ ಮುನ್ನಡೆಯಲಿದ್ದು, ಪ್ರಗತಿ ಸಾಧಿಸಲಿದೆ. ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಕರೆಗೆ ಯಾರೂ ಕಿವಿಕೊಡುವುದಿಲ್ಲ. ಅವರ ಮಹಾಮೈತ್ರಿ ಎಂಬ ಬಲೂನ್ ಶೀಘ್ರದಲ್ಲಿಯೇ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದಾರೆ. 
ಇದರಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾತನಾಡಿ, ಹತಾಶರಾಗಿರುವ ವಿರೋಧ ಪಕ್ಷಗಳಿಗೆ ಬೇರಾವುದೇ ತಂತ್ರಗಳು ಹಾಗೂ ನಾಯಕತ್ವವಿಲ್ಲ. ಇದನ್ನು ಬಿಟ್ಟರೆ ಬೇರೇನನ್ನೂ ಅವರಿಂದ ನಿರೀಕ್ಷಿಸಲು ಸಾಧ್ಯ?. ಧನಾತ್ಮಕ ಹಾಗೂ ಋಣಾತ್ಮಕಗಳ ನಡುವಿನ ವ್ಯತ್ಯಾಸಗಳನ್ನು ಅರಿಯುವ ಬುದ್ಧಿಯನ್ನು ದೇವರು ಅವರಿಗೆ ನೀಡಲಿ ಎಂದು ಆಶಿಸುತ್ತೇನೆ. ಇಲ್ಲದೇ ಹೋದರೆ ಭವಿಷ್ಯದಲ್ಲಿ ವಿರೋಧ ಪಕ್ಷಗಳ ಸ್ಥಾನವನ್ನೂ ಅವರು ಕಳೆದುಕೊಳ್ಳುತ್ತಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com