ಪ್ರಧಾನಿ ಮೋದಿಯವರನ್ನು ಭಾರತದ ರಾಜಕೀಯದಿಂದ ದೂರವಾಗಿಸುವುದು ಕಾಂಗ್ರೆಸ್, ಪಾಕ್ ಬಯಕೆ: ಬಿಜೆಪಿ

ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಬಿಜೆಪಿ, ವಿರೋಧ ಪಕ್ಷಗಳು ಹಾಗೂ ಪಾಕಿಸ್ತಾನದಲ್ಲಿರುವ ನಾಯಕರಿಬ್ಬರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭಾರತೀಯ ರಾಜಕೀಯದಿಂದ ದೂರಾಗಿಸಲು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಬಿಜೆಪಿ, ವಿರೋಧ ಪಕ್ಷಗಳು ಹಾಗೂ ಪಾಕಿಸ್ತಾನದಲ್ಲಿರುವ ನಾಯಕರಿಬ್ಬರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭಾರತೀಯ ರಾಜಕೀಯದಿಂದ ದೂರಾಗಿಸಲು ಬಯಸುತ್ತಿದೆ ಎಂದು ಸೋಮವಾರ ಹೇಳಿದೆ. 
ಪಾಕಿಸ್ತಾನ ನಾಯಕರು ಹಾಗೂ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಸಚಿವರು   ಮೋದಿ ವಿರುದ್ಧ ನೀಡುತ್ತಿರುವ ಹೇಳಿಕೆಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು, ಪಾಕಿಸ್ತಾನದ ನಾಯಕರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆಂದು ಹೇಳಿದ್ದಾರೆ. 
ಕೆಲ ಜೆರು ರಾಹುಲ್ ಗಾಂಧಿ ಭಾರತದ ದೊಡ್ಡ ನಾಯಕರಾಗಬೇಕೆಂದು ಬಯಸುತ್ತಿದ್ದಾರೆ. ಅವರೆಲ್ಲರೂ ಯಾರೂ? ಎಲ್ಲರೂ ಪಾಕಿಸ್ತಾನದ ನಾಯಕರು. ಅಲ್ಲದೆ, ಅವರೆಲ್ಲರೂ ಭ್ರಷ್ಟಾಚಾರ ಹಾಗೂ ಶ್ರೀಮಂತರಿಗೆ ಬೆಂಬಲ ನೀಡುತ್ತಿದ್ದಾರೆ. ಬಡವರು, ಹಿಂದುಳಿದವರು ಹಾಗೂ ಸಾಮಾನ್ಯ ಜನರು ಮೋದಿಯವರ ಬೆನ್ನಿಗೆ ನಿಂತಿದ್ದಾರೆ. ಅವರನ್ನು ಯಾರೂ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಪಾಕಿಸ್ತಾನ ಹಾಗೂ ಕಾಂಗ್ರೆಸ್ ಇಬ್ಬರೂ ಮೋದಿ ಕಂಡೆ ಹತಾಶೆಯಲ್ಲಿದ್ದಾರೆ. ಮೋದಿಯವರನ್ನು ಭಾರತೀಯ ರಾಜಕೀಯದಿಂದ ದೂರಾಗಿಸುವುದೇ ಇಬ್ಬರ ಗುರಿಯಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com