ದೇಶ

ಒಡಿಶಾ: ಹದಗೆಟ್ಟ ರಸ್ತೆಗಳು :ಮಲಗಿದ ಹಾಸಿಗೆಯಲ್ಲಿಯೇ ರೋಗಿಯನ್ನು ಆಸ್ಪತ್ರೆಗೆ ರವಾನಿಸಿದ ಗ್ರಾಮಸ್ಥರು !

ಒಡಿಶಾ: ಹದಗೆಟ್ಟ ರಸ್ತೆಗಳು :ಮಲಗಿದ ಹಾಸಿಗೆಯಲ್ಲಿಯೇ ರೋಗಿಯನ್ನು ಆಸ್ಪತ್ರೆಗೆ ರವಾನಿಸಿದ ಗ್ರಾಮಸ್ಥರು !
ಹಾಸಿಗೆಯಲ್ಲಿಯೇ ರೋಗಿಯನ್ನು ಆಸ್ಪತ್ರೆಗೆ ರವಾನಿಸುತ್ತಿರುವ ಗ್ರಾಮಸ್ಥರು
Published On :

 ಒಡಿಶಾ: ಹದಗೆಟ್ಟ ರಸ್ತೆಗಳು  ಒಡಿಶಾದಲ್ಲಿನ ಬಹುಮುಖ್ಯ ಸಮಸ್ಯೆಗಳೊಂದಾಗಿದೆ. ಸಮರ್ಪಕ ರಸ್ತೆ ಇಲ್ಲದ ಕಾರಣ  ಸೂಕ್ತ ವೇಳೆಯಲ್ಲಿ  ಚಿಕಿತ್ಸೆ ದೊರೆಯದೆ ಅನೇಕ ರೋಗಿಗಳು ಜೀವ ಬಿಡುವಂತಾಗಿದೆ.

ತುರ್ತು ಚಿಕಿತ್ಸೆಗೆ ಸ್ಪಂದಿಸಲು 102 ಮತ್ತು 108 ಆಂಬ್ಯುಲೆನ್ಸ್ ಸೇವೆ ಇದ್ದರೂ ಸರಿಯಾದ ರಸ್ತೆ ಇಲ್ಲದ ಕಾರಣ ಅವುಗಳು ಇದ್ದು ಇಲ್ಲದಂತಾಗಿದೆ. ಗರ್ಭೀಣಿಯರನ್ನು ಮಲಗಿದ ಹಾಸಿಗೆಯಲ್ಲಿಯೇ ಅಥವಾ ಸ್ಕೂಟರ್, ಸೈಕಲ್ ಗಳ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.

 ಇತ್ತೀಚಿಗಷ್ಟೇ ಬಾಲಸೂರು ಹಾಗೂ ನಾಬರಂಗಪುರ ಜಿಲ್ಲೆಯಲ್ಲಿ ಇಬ್ಬರು ಗರ್ಭೀಣಿಯರನ್ನು  ಕೆಟ್ಟ ರಸ್ತೆಯಿಂದಾಗಿ ಆಂಬ್ಯುಲೆನ್ಸ್ ಸೇವೆ ದೊರೆಯದೆ ಮಲಗಿದ ಹಾಸಿಗೆ ಮೇಲೆಯೇ ಆಸ್ಪತ್ರೆಗೆ ರವಾನಿಸಲಾಗಿತ್ತು.

ಈ ಘಟನೆ  ಬೆನ್ನಲ್ಲೇ ಇಂದು ಮಯೂರ್ ಬಂಜ್ ನಲ್ಲಿ ರೋಗಿಯೋರ್ವರನ್ನು  ಚಿಕಿತ್ಸೆಗಾಗಿ  ಗ್ರಾಮಸ್ಥರು ಹಾಸಿಗೆ ಮೇಲೆಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲಾ ಕೆಸರು ಗದ್ದೆಯಂತಾಗಿದ್ದು, ಐದಾರು ಮಂದಿ ಗ್ರಾಮಸ್ಥರು ಕಾನನದಂತಿರುವ  ಪ್ರದೇಶದಲ್ಲಿ ರೋಗಿಯೊಬ್ಬರನ್ನು ಅವರು ಮಲಗಿದ ಹಾಸಿಗೆ ಹಿಡಿದೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಚಿಕಿತ್ಸೆ ಒದಗಿಸಿದ್ದಾರೆ.

ಒಡಿಶಾದಲ್ಲಿ ಈ ಸಮಸ್ಯೆ  ಸರ್ವೇ ಸಾಮಾನ್ಯ ಎಂಬಂತಾಗಿದ್ದು. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.