ಸೊಪೋರ್ ಎನ್ ಕೌಂಟರ್: ದಾಳಿಗೆ ಸಂಚು ರೂಪಿಸಿದ್ದ ಓರ್ವ ಉಗ್ರನ ಹೊಡೆದುರುಳಿಸಿದ ಸೇನೆ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚಿದ್ದು, ಶನಿವಾರ ಮುಂಜಾನೆ ಸೇನೆಯ ಗುಂಡಿಗೆ ಓರ್ವ ಉಗ್ರ ಹತನಾಗಿದ್ದಾನೆ.
ಸೊಪೋರ್ ಎನ್ ಕೌಂಟರ್
ಸೊಪೋರ್ ಎನ್ ಕೌಂಟರ್
Updated on
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚಿದ್ದು, ಶನಿವಾರ ಮುಂಜಾನೆ ಸೇನೆಯ ಗುಂಡಿಗೆ ಓರ್ವ ಉಗ್ರ ಹತನಾಗಿದ್ದಾನೆ.
ಕಾಶ್ಮೀರದ ಸೋಪೋರ್ ಜಿಲ್ಲೆಯ ಮಲ್ಮನ್ ಪೋರಾದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದ್ದು, ಸೈನಿಕರ ಗುಂಡೇಟಿಗೆ ಓರ್ವ ಉಗ್ರ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ನಿನ್ನೆ ತಡರಾತ್ರಿಯಲ್ಲಿ ಮಲ್ಮನ್ ಪೋರಾದಲ್ಲಿ ಉಗ್ರರು ಅವಿತಿರುವ ಕುರಿತು ಮಾಹಿತಿ ಪಡೆದ ಸೈನಿಕರು ಮುಂಜಾನೆಯೇ ಪ್ರದೇಶವನ್ನು ಸುತ್ತುವರೆದರು. ಈ ವೇಳೆ ಉಗ್ರರು ಏಕಾಏಕಿ ಸೈನಿಕರತ್ತ ಗುಂಡಿನ ದಾಳಿ ನಡೆಸಿದ್ದು, ಸೈನಿಕರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಯೋಧನಿಗೆ ಗುಂಡೇಟು ತಗುಲಿದ್ದು, ಗಾಯಾಳು ಸೈನಿಕನನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದೆ.
ಅಂತೆಯೇ ಸೈನಿಕ ಗುಂಡೇಟಿಗೆ ಓರ್ವ ಉಗ್ರ ಕೂಡ ಹತನಾಗಿದ್ದಾನೆ. ಘಟನಾ ಪ್ರದೇಶದಲ್ಲಿ 3 ರಿಂದ 4 ಉಗ್ರರಿರುವ ಸಾಧ್ಯತೆ ಇದ್ದು, ಎನ್ ಕೌಂಟಪರ್ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com