ಗಾಜು ಲೇಪಿತ ಮಾಂಜಾ ದಾರಕ್ಕೆ ಮತ್ತೊಂದು ಬಲಿ: ಗಂಟಲು ಸೀಳಿದ ಗಾಳಿಪಟ ದಾರ, ಬಾಲಕಿ ಸಾವು

ಗಾಜು ಲೇಪಿತ ಮಾಜಾ ದಾರಕ್ಕೆ ಮತ್ತೊಂದು ಬಲಿಯಾಗಿದ್ದು, ಗಾಳಿಪಟದ ದಾರಕ್ಕೆ 4 ವರ್ಷದ ಪುಟ್ಟ ಬಾಲಕಿಯ ಕುತ್ತು ಸಿಲುಕಿ ಕತ್ತರಿಸಿ ಹೋಗಿ ಆಕೆ ಸಾವನ್ನಪ್ಪಿದ್ದಾಳೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಗಾಜು ಲೇಪಿತ ಮಾಜಾ ದಾರಕ್ಕೆ ಮತ್ತೊಂದು ಬಲಿಯಾಗಿದ್ದು, ಗಾಳಿಪಟದ ದಾರಕ್ಕೆ 4 ವರ್ಷದ ಪುಟ್ಟ ಬಾಲಕಿಯ ಕುತ್ತು ಸಿಲುಕಿ ಕತ್ತರಿಸಿ ಹೋಗಿ ಆಕೆ ಸಾವನ್ನಪ್ಪಿದ್ದಾಳೆ.

ತಂದೆ ಮತ್ತು ಮಗಳು ಹನುಮಾನ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಖಜೂರಿ ಚೌಕ್ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ಮೃತ ಬಾಲಕಿಯನ್ನು 4 ವರ್ಷದ ಇಶಿಕಾ ಎಂದು ಗುರುತಿಸಲಾಗಿದ್ದು, ಈಕೆ ಸೋನಿಯಾ ವಿಹಾರ್ ನಿವಾಸಿ ಎಂದು ತಿಳಿದುಬಂದಿದೆ.

ಬಾಲಕಿ ಇಶಿಕಾ ತನ್ನ ತಂದೆಯೊಂದಿಗೆ ಮೋಟಾರುಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಗಾಜು ಲೇಪಿತ ಗಾಳಿಪಟದ ದಾರ (ಮಂಜಾ) ಕುತ್ತಿಗೆಗೆ ಸುತ್ತಿಗೊಂಡು ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಮಗಳ ಕುತ್ತಿಗೆಗೆ ಹೊಡೆದ ಗಾಳಿಪಟ ದಾರವನ್ನು ಗಮನಿಸಿದ ಸಂತ್ರಸ್ತೆಯ ತಂದೆ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಮಗು ಮೃತಪಟ್ಟಿದೆ ಎಂದು ಘೋಷಿಸಲಾಯಿತು. 

ಕಳೆದ ಜನವರಿಯಲ್ಲಿ ಜೈಪುರದ ವಿದ್ಯಾನಗರದಲ್ಲಿ 6 ವರ್ಷದ ಬಾಲಕನೋರ್ವ ಇದೇ ಮಾಂಜಾ ದಾರಕ್ಕೆ ಬಲಿಯಾಗಿದ್ದ. ಇತ್ತೀಚೆಗೆ ಇದೇ ದೆಹಲಿಯಲ್ಲಿ ಟೆಕ್ಕಿಯೊಬ್ಬ ಬೈಕ್ ನಲ್ಲಿ ತೆರಳುತ್ತಿದ್ದಾಗ ಮಾಜಾ ದಾರ ಆತನ ಕುತ್ತಿಗೆ ಸೀಳಿ ಕೊಂದು ಹಾಕಿತ್ತು. ಈ ಘಟನೆ ಹಸಿರಾಗಿರುವಾಗಲೇ ಮತ್ತೊಂದು ಧಾರುಣ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com