ಭೀಕರ ವಿಡಿಯೋ: ಬಸ್-ಲಾರಿ ನಡುವೆ ಸಿಲುಕಿ ಗರ್ಭೀಣಿ ಮಹಿಳೆ ಅಪ್ಪಚ್ಚಿ, ಸಾವು!

ಇದು ಎಂತ ದುರ್ವಿಧಿ. ನಿಂತಿದ್ದ ಬಸ್ ಅನ್ನು ಹತ್ತಲು ಮುಂದಾಗುತ್ತಿದ್ದ ಗರ್ಭಿಣಿ ಮಹಿಳೆಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ್ದರಿಂದ ಬಸ್ ಮತ್ತು ಲಾರಿ ಮಧ್ಯೆ ಸಿಲುಕಿ ಗರ್ಭೀಣಿ ಮಹಿಳೆ ಸಾವನ್ನಪ್ಪಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾಂಚಿಪುರಂ: ಇದು ಎಂತ ದುರ್ವಿಧಿ. ನಿಂತಿದ್ದ ಬಸ್ ಅನ್ನು ಹತ್ತಲು ಮುಂದಾಗುತ್ತಿದ್ದ ಗರ್ಭಿಣಿ ಮಹಿಳೆಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ್ದರಿಂದ ಬಸ್ ಮತ್ತು ಲಾರಿ ಮಧ್ಯೆ ಸಿಲುಕಿ ಗರ್ಭೀಣಿ ಮಹಿಳೆ ಸಾವನ್ನಪ್ಪಿರುವ ದಾರುಣ ವಿಡಿಯೋ ಭೀಕರವಾಗಿದೆ.
ಬಸ್ ನಿಲ್ದಾಣದ ಬಳಿ ಸರ್ಕಾರಿ ಬಸ್ ಬಂದು ನಿಂತಿತ್ತು. ಈ ವೇಳೆ 35 ವರ್ಷದ ಗರ್ಭೀಣಿ ಮಹಿಳೆಯೊಬ್ಬರು ಬಸ್ ಅನ್ನು ಹತ್ತಲು ಮುಂದಾಗಿದ್ದರು. ಆ ವೇಳೆ ಹಿಂಬದಿಯಿಂದ ಬಂದ ಲಾರಿ ಮೊದಲಿಗೆ ಬೈಕ್ ಗೆ ಗುದ್ದಿದ್ದು ಬೈಕ್ ಸವಾರ ಲಾರಿ ಕೆಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಮಹಿಳೆ ಮಾತ್ರ ಬಸ್ ಮತ್ತು ಲಾರಿ ನಡುವೆ ಸಿಲುಕಿದ್ದಾರೆ. 
ಈ ವೇಳೆ ಅಲ್ಲಿದ್ದ ಜನರು ಲಾರಿಯನ್ನು ಹಿಂದಕ್ಕೆ ತೆಗೆಯುವಂತೆ ಕೂಗಿದ್ದಾರೆ. ಮೊದಲೇ ಗಾಬರಿಗೊಂಡಿದ್ದ ಲಾರಿ ಚಾಲಕ ಕೆಲ ಸೆಕೆಂಡ್ ಗಳ ಕಾಲ ಬಸ್ ಹಿಂದಕ್ಕೆ ತೆಗೆಯದಿದ್ದರಿಂದ ಉಸಿರುಗಟ್ಟಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಭೀಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com