ಮೋದಿ ಅರುಣಾಚಲ ಭೇಟಿಗೆ ಚೀನಾ ಆಕ್ಷೇಪ: ಭಾರತದಿಂದ ತೀಕ್ಷ್ಣ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದಕ್ಕೆ ಭೇಟಿ ನೀಡಿರುವುದನ್ನು ಖಂಡಿಸಿರುವ ಚೀನಾಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು,...
ನರೇಂದ್ರ ಮೋದಿ - ಅರುಣಾಚಲ ಸಿಎಂ ಪೆಮಾ ಖಂಡು
ನರೇಂದ್ರ ಮೋದಿ - ಅರುಣಾಚಲ ಸಿಎಂ ಪೆಮಾ ಖಂಡು
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದಕ್ಕೆ ಭೇಟಿ ನೀಡಿರುವುದನ್ನು ಖಂಡಿಸಿರುವ ಚೀನಾಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಅಸಾಧಾರಣ ಭಾಗ ಎಂದು ಶನಿವಾರ ಹೇಳಿದೆ.
ಅರುಣಾಚಲ ಪ್ರದೇಶದ ಭಾರತದ ಅವಿಭಾಜ್ಯ ಅಂಗ ಮತ್ತು ಅಸಾಧಾರಣ ಪ್ರದೇಶವಾಗಿದ್ದು, ನಮ್ಮ ದೇಶದ ನಾಯಕರು, ಭಾರತದ ಇತರೆ ಭಾಗಗಳಿಗೆ ಭೇಟಿ ನೀಡಿದ ಮಾದರಿಯಲ್ಲೇ ಗಡಿ ಭಾಗಕ್ಕೂ ಭೇಟಿ ನೀಡುತ್ತಾರೆ. ಇದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ವಿದೇಶಾಂಗ ಸಚಿವಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಚಾರವನ್ನು ಚೀನಾಗೆ ಸಾಕಷ್ಟು ಬಾರಿ ತಿಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಉತ್ತರಿಸಿದೆ. 
ಪ್ರಧಾನಿ ಮೋದಿ ಅವರು ಇಂದು ಅರುಣಾಚಲ ಪ್ರದೇಶದಲ್ಲಿ ಯೋಜಿಸಲಾದ ಸುಮಾರು 4 ಸಾವಿರ ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರಲ್ಲದೆ, ಗಡಿ ಭಾಗದ ಪ್ರದೇಶಗಳ ಸಂಪರ್ಕಕ್ಕೆ ಎನ್‌ಡಿಎ ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ. ಆದರೆ ಉಭಯ ದೇಶಗಳ ಗಡಿ ಸಮಸ್ಯೆ ಇರುವ ಭಾಗದಲ್ಲಿ ಭಾರತದ ರಾಜಕೀಯ ನಾಯಕರ ಚಟುವಟಿಕೆಗಳು ಸರಿಯಲ್ಲ ಎಂದು ಚೀನಾ ಪ್ರಧಾನಿ ಮೋದಿ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದೆ.
ಗಡಿ ಭಾಗದಲ್ಲಿನ ಪ್ರದೇಶಗಳ ಗಂಭೀರತೆಯ ಬಗ್ಗೆ ಭಾರತದ ರಾಜಕೀಯ ನಾಯಕರಿಗೆ ಮನದಟ್ಟೇ ಆಗಿಲ್ಲ. ಈ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಹೆಚ್ಚಿಸುವುದರಿಂದ ಗಡಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ ಎಂದು ಚೀನಾ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com