2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ- ರಜನಿಕಾಂತ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ನಟ ಹಾಗೂ ರಾಜಕಾರಣಿ ರಜನಿಕಾಂತ್ ಇಂದು ಸ್ಪಷ್ಪಪಡಿಸಿದ್ದಾರೆ.
ರಜನಿಕಾಂತ್
ರಜನಿಕಾಂತ್
Updated on: 

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ನಟ ಹಾಗೂ ರಾಜಕಾರಣಿ ರಜನಿಕಾಂತ್ ಇಂದು ಸ್ಪಷ್ಪಪಡಿಸಿದ್ದಾರೆ. ಮಾಧ್ಯಮಗಳು ಪ್ರಚಾರಕ್ಕಾಗಿ ತಮ್ಮ ಪಕ್ಷದ ಚಿಹ್ನೆ ಹಾಗೂ ಭಾವಚಿತ್ರವನ್ನು ಬಳಸದಂತೆ ಅವರು ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ಆದ್ದರಿಂದ ರಜನಿ ಪ್ಯಾನ್ ಕ್ಲಬ್ ಮತ್ತು ರಜನಿ ಮಕ್ಕಳ್ ಮಂದ್ರಾಮ್  ಹೆಸರಿನಲ್ಲಿ  ತಮ್ಮ ಪೋಟೋ ಹಾಗೂ ಧ್ವಜಗಳನ್ನು ಯಾವುದೇ ಪಕ್ಷದ ಬೆಂಬಕ್ಕಾಗಿ ಅಥವಾ ಪ್ರಚಾರಕ್ಕಾಗಿ ಬಳಸದಂತೆ ಅವರ ಹೇಳಿದ್ದಾರೆ.

ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೇಂದ್ರದಲ್ಲಿ ಈ ವಿಚಾರವನ್ನು ಬಗೆಹರಿಸುವ ನಂಬಿಕೆ ಇರುವ ಪಕ್ಷಕ್ಕೆ ಜನತೆ ಮತ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

2017 ಡಿಸೆಂಬರ್ 31 ರಂದು 68 ವರ್ಷದ ರಜನಿ ಕಾಂತ್ ರಾಜಕೀಯ ಪ್ರವೇಶಿಸಿದ್ದರು. ಆದಾಗ್ಯೂ,  ತಮ್ಮ ಪ್ಯಾನ್ ಕ್ಲಬ್ ನ್ನು ರಜನಿ ಮಕ್ಕಳ ಮಾಂದ್ರಾಮ್ ಆಗಿ  ರಜನಿಕಾಂತ್ ಪರಿವರ್ತಿಸಿದ್ದರು.
ಆದಾಗ್ಯೂ, ಅಧಿಕೃತವಾಗಿ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರಲಿಲ್ಲ. ರಜನಿಕಾಂತ್  ರಾಜಕೀಯ ಪ್ರವೇಶದ ನಂತರ ತೂತುಕುಡಿಯಲ್ಲಿ ಸ್ಟರ್ಲೈಟ್  ವಿರೋಧಿ ಪ್ರತಿಭಟನೆ ಸೇರಿದಂತೆ ಹಲವು ವಿಷಯಗಳ ಸಂಬಂಧ ಜನರೊಂದಿಗೆ ಸಭೆ ನಡೆಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com