ಕಾರ್ಗಿಲ್ ಸಂಕಷ್ಟವಷ್ಟೇ ಅಲ್ಲ.. ಪುಲ್ವಾಮ ಉಗ್ರ ದಾಳಿ ಪ್ರತೀಕಾರದಲ್ಲೂ ಭಾರತಕ್ಕೆ ಇಸ್ರೇಲ್ ಸಾಥ್?

ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದ ವೇಳೆ ಭಾರತಕ್ಕೆ ನೆರವು ನೀಡಿದ್ದ ಏಕೈಕ ರಾಷ್ಟ್ರ ಇಸ್ರೇಲ್ ಇದೀಗ ಪುಲ್ವಾಮ ಉಗ್ರ ದಾಳಿ ಬಳಿಕ ಪ್ರತೀಕಾರಕ್ಕಾಗಿ ಕಾಯುತ್ತಿದ್ದ ಭಾರತಕ್ಕೆ ಮತ್ತೆ ಸಾಥ್ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದ ವೇಳೆ ಭಾರತಕ್ಕೆ ನೆರವು ನೀಡಿದ್ದ ಏಕೈಕ ರಾಷ್ಟ್ರ ಇಸ್ರೇಲ್ ಇದೀಗ ಪುಲ್ವಾಮ ಉಗ್ರ ದಾಳಿ ಬಳಿಕ ಪ್ರತೀಕಾರಕ್ಕಾಗಿ ಕಾಯುತ್ತಿದ್ದ ಭಾರತಕ್ಕೆ ಮತ್ತೆ ಸಾಥ್ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು.. ಈ ಹಿಂದೆ ಸಂಕಷ್ಟದಲ್ಲಿ ಭಾರತದ ಕೈ ಹಿಡಿದಿದ್ದ ಭಾರತದ ಪರಮಾಪ್ತ ರಾಷ್ಟ್ರ ಇಸ್ರೇಲ್ ಇದೀಗ ಭಾರತದ ಪ್ರತೀಕಾರದಲ್ಲೂ ಸಾಥ್ ನೀಡುವ ಮೂಲಕ ತಾನೇಕೆ ಭಾರತಕ್ಕೆ ವಿಶೇಷ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.. ಇದಕ್ಕೆ ಇಂಬು ನೀಡುವಂತೆ ಇಂದು ಮುಂಜಾನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯು ಸೇನೆ ನಡೆಸಿದ ವಾಯು ದಾಳಿಯಲ್ಲಿ ಇಸ್ರೇಲ್ ನಿರ್ಮಿತ ಹೆರಾನ್ ಪೈಲಟ್ ರಹಿತ ಡ್ರೋಣ್ ಕಣ್ಗಾಗವಲು ಮಾಡುವ ಮೂಲಕ ಇಡೀ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಹೆರಾನ್ ಗೆ ಭಾರತದ ಡಿಆರ್ ಡಿಒ ನಿರ್ಮಿತ ನೇತ್ರಾ ಕಣ್ದಾವಲು ವಿಮಾನ ಕೂಡ ಸಾಥ್ ನೀಡಿದ್ದು ವಿಶೇಷ..
ವಾಯು ಸೇನೆಯ ಕಾರ್ಯಾಚರಣೆಯಲ್ಲಿ ಇಸ್ರೇಲ್ ಗುಪ್ತಚರ ಇಲಾಖೆ ನೆರವು!
44 ಮಂದಿ ಯೋಧರ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿ ದಿನದಂದೇ ಭಾರತ ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಯೋಜನೆ ರೂಪಿಸಿತ್ತು. ಇದಕ್ಕಾಗಿ ಭಾರತೀಯ ಗುಪ್ತಚರ ಸಂಸ್ಛೆ ಮಾತ್ರವಲ್ಲದೇ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಕೂಡ ಕೈ ಜೋಡಿಸಿರುವ ಸಾಧ್ಯತೆ ಕುರಿತು ವರದಿಗಳು ಕೇಳಿಬರುತ್ತಿವೆ. ಪುಲ್ವಾಮ ಉಗ್ರ ದಾಳಿ ಬಳಿಕ ಭಾರತಕ್ಕೆ ಬಹಿರಂಗವಾಗಿಯೇ ನೈತಿಕ ಬೆಂಬಲ ನೀಡಿದ್ದ ಇಸ್ರೇಲ್ ಸರ್ಕಾರ, ಭಾರತ ಕೈಗೊಳ್ಳುವ ಯಾವುದೇ ನಡೆಗೆ ತಾನು ಸಾಥ್ ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ತನ್ನ ಗುಪ್ತಚರ ಸಂಸ್ಥೆಯ ಮೊಸಾದ್ ಮೂಲಕ ಭಾರತೀಯ ಗುಪ್ತಚರ ಸಂಸ್ಥೆಯೊಂದಿಗೆ ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ ಎನ್ನಲಾಗಿದೆ,
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇಂದು ಮುಂಜಾನೆ ಭಾರತೀಯ ವಾಯು ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಜೈಶ್ ಉಗ್ರ ಸಂಘಟನೆಯ ಅಡಗುದಾಣವೂ ಸೇರಿದಂತೆ 3 ಉಗ್ರದಾಣಗಳು ಮತ್ತು ಶಸ್ತ್ರಾಸ್ತ್ರ ಗೋದಾಮುಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಿ ಸುರಕ್ಷಿತವಾಗಿ ವಾಪಸ್ ಆಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com