ಬಿಜೆಪಿ ಫೈರ್ ಬ್ರಾಂಡ್ ಶತೃಘ್ನ ಸಿನ್ಹಾ ವಿಐಪಿ ಸ್ಟೇಟಸ್ ಗೆ ಕತ್ತರಿ!

ಬಿಜೆಪಿ ಫೈರ್ ಬ್ರಾಂಡ್ ಹಾಗೂ ಬಾಲಿವುಡ್ ಹಿರಿಯ ನಟ ಶತೃಘ್ನ ಸಿನ್ಹಾ ಅವರಿಗೆ ನೀಡಲಾಗಿದ್ದ ವಿಐಪಿ ಸ್ಖಾನಮಾನವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪಾಟ್ನಾ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಪಾಟ್ನಾ: ಬಿಜೆಪಿ ಫೈರ್ ಬ್ರಾಂಡ್ ಹಾಗೂ ಬಾಲಿವುಡ್ ಹಿರಿಯ ನಟ ಶತೃಘ್ನ ಸಿನ್ಹಾ ಅವರಿಗೆ ನೀಡಲಾಗಿದ್ದ ವಿಐಪಿ ಸ್ಖಾನಮಾನವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪಾಟ್ನಾ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ವಿಐಪಿಗಳಿಗೆ ನೀಡಲಾಗುವ ಭದ್ರತಾ ತಪಾಸಣೆ ಮತ್ತು ಬೋರ್ಡಿಂಗ್ ಪಾಸ್ ಗಾಗಿ ಕ್ಯೂ ನಲ್ಲಿ ನಿಲ್ಲುವುದರಿಂದ ವಿಐಪಿ ಸ್ಥಾನಮಾನ ಹೊಂದಿರುವ ಪ್ರತಿಷ್ಟಿತ ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗುತ್ತದೆ. ಇದೀಗ ಈ ಸ್ಥಾನಮಾನ ಹೊಂದಿರುವ ಗಣ್ಯ ವ್ಯಕ್ತಿಗಳ ಪಟ್ಟಿಯಿಂದ ಶತೃಘ್ನ ಸಿನ್ಹಾ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಪಾಟ್ನಾದ ಜಯ ಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಂದ್ರ ಸಿಂಗ್ ಲಹೌರಿಯಾ ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿರುವ ರಾಜೇಂದ್ರ ಸಿಂಗ್ ಅವರು, ಸಿನ್ಹಾ ಅವರಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ನೀಡಿದ್ದ ವಿಶೇಷ ವಿನಾಯಿತಿ ಕಾಲಾವಕಾಶ ಮುಕ್ತಾಯವಾಗಿದ್ದು, ಇದೇ ಕಾರಣಕ್ಕೆ ಅವರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಅವರ ವಿನಾಯಿತಿ  ಅವಧಿ ವಿಸ್ತರಣೆ ಕೋರಿ ಈ ವರೆಗೂ ತಮಗೆ ಯಾವುದೇ ರೀತಿಯ ಅರ್ಜಿ ಅಥವಾ ಆದೇಶ ಕೈ ಸೇರಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com