ಉತ್ತರ ಪ್ರದೇಶ: ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳುವ ವೇಳೆ ಟೆರೇಸ್ ನಿಂದ ಬಿದ್ದ ಮಹಿಳೆ ಸಾವು!

ಮಂಗಗಳ ದಾಳಿಯ ಪರಿಣಾಮ ಟೆರೇಸ್ ಮೇಲಿನಿಂದ ಬಿದ್ದು 60 ವರ್ಷದ ಮಹಿಳೆಯೊಬ್ಬರು ಮೃತಪಟ್ಟರೆ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲರಾಮಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶ: ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳುವ ವೇಳೆ ಟೆರೇಸ್ ನಿಂದ ಬಿದ್ದ ಮಹಿಳೆ ಸಾವು!
ಉತ್ತರ ಪ್ರದೇಶ: ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳುವ ವೇಳೆ ಟೆರೇಸ್ ನಿಂದ ಬಿದ್ದ ಮಹಿಳೆ ಸಾವು!
Updated on
ಬಲರಾಮಪುರ(ಉತ್ತರ ಪ್ರದೇಶ): ಮಂಗಗಳ ದಾಳಿಯ ಪರಿಣಾಮ ಟೆರೇಸ್ ಮೇಲಿನಿಂದ ಬಿದ್ದು 60 ವರ್ಷದ ಮಹಿಳೆಯೊಬ್ಬರು ಮೃತಪಟ್ಟರೆ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲರಾಮಪುರದಲ್ಲಿ ನಡೆದಿದೆ.
ಜಿಲ್ಲೆಯ ಮಥುರಾ ಬಜಾರ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೋಲೀಸರು ಹೇಳಿದ್ದಾರೆ.
ಮಂಗಗಳು ದಾಳಿ ಮಾಡಿದ್ದ ವೇಳೆ ಸಾವಿತ್ರಿ ದೇವಿ ತನ್ನ ಸೊಸೆ ರಿನು ಜತೆಗೆ ಟೆರೇಸ್ ನಲ್ಲಿ ಕುಳಿತಿದ್ದರು. ಮಂಗಗಳ ನಿರಂತರ ದಾಳಿಉಯಿಂದ ಪಾರಆಗಲು ಇಬ್ಬರೂ ಟೆರೇಸ್ ನ ತುದಿಗೆ ಬಂದಿದ್ದಾಗ ಮೇಲಿನಿಂದ ಬಿದ್ದಿದ್ದಾರೆ.
ಘಟನೆಯಲ್ಲಿ ಸಾವಿತ್ರಿ ದೇವಿ ಸ್ಥಳದಲ್ಲೇ ಮೃತಪಟ್ಟರೆ ರೀನು ಗಂಭೀರ ಗಾಯಗಳೊಡನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com