ಬಿಹಾರ; ಆರ್ ಜೆಡಿ ನಾಯಕ ರಘುವರ್ ರಾಯ್ ದುಷ್ಕರ್ಮಿಗಳಿಂದ ಗುಂಡಿಕ್ಕಿ ಹತ್ಯೆ

ಬಿಹಾರದ ಸಮಸ್ತಿಪುರದ ಜಿಲ್ಲೆಯಲ್ಲಿ ರಾಷ್ಟ್ರೀಯ ಜನತಾ ದಳ ನಾಯಕ ರಘುವರ್ ರಾಯ್ ಅಪರಿಚಿತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಪಾಟ್ನಾ: ಬಿಹಾರದ ಸಮಸ್ತಿಪುರದ ಜಿಲ್ಲೆಯಲ್ಲಿ ರಾಷ್ಟ್ರೀಯ ಜನತಾ ದಳ ನಾಯಕ ರಘುವರ್ ರಾಯ್ ಅಪರಿಚಿತ ದುಷ್ಕರ್ಮಿಗಳಿಂದ ಗುರುವಾರ ನಸುಕಿನ ಜಾವ ಗುಂಡಿಕ್ಕಿ ಹತ್ಯೆಗೀಡಾಗಿದ್ದಾರೆ.

ರಘುವರ್ ರಾಯ್ ಕಲ್ಯಾಣಪುರದ ತಮ್ಮ ಮನೆ ಸಮೀಪ ಬೆಳಗಿನ ಜಾವ ವಾಕಿಂಗ್ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಹರ್ಪರೀತ್ ಕೌರ್ ತಿಳಿಸಿದ್ದಾರೆ.

ರಾಯ್ ಜಿಲ್ಲಾ ಪರಿಷತ್ ನ ಮಾಜಿ ಸದಸ್ಯರಾಗಿದ್ದರು. ಅವರ ಹತ್ಯೆಗೆ ನೂರಾರು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಸಮಸ್ತಿಪುರ-ದರ್ಬಗಂಗಾ ರಸ್ತೆಯನ್ನು ತಡೆದಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟನಾಕಾರರು ಟಯರ್ ಹೊತ್ತಿಸಿ ರಸ್ತೆ ತಡೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com