ಭುವನೇಶ್ವರ್: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒದ ಬಹು ಉದ್ದೇಶಿತ ರಾಡಾರ್ ನಿಗ್ರಹ ಕ್ಷಿಪಣಿ ಪರಿಕ್ಷಾರ್ಥ ಉಡಾವಣೆ ಶುಕ್ರವಾರ ಯಶಸ್ವಿಯಾಗಿದೆ.
ಇದೇ ಮೊದಲ ಬಾರಿಗೆ ಡಿಆರ್ ಡಿಒ ವಿಜ್ಞಾನಿಗಳು ರಾಡಾರ್ ನಿಗ್ರಹ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದ್ದು ಮೊದಲ ಪ್ರಯತ್ನದಲ್ಲೇ ಕ್ಷಿಪಣಿ ಯಶಸ್ವಿಯಾಗುವ ಮೂಲಕ ವಿಜ್ಞಾನಿಗಳ ಮೊಗದಲ್ಲಿ ನಗು ತರಿಸಿದೆ. ಒಡಿಶಾ ಭಾರತೀಯ ಸೇನೆಯ ನಿಯಂತ್ರಣದಲ್ಲಿರುವ ಕರಾವಳಿ ತೀರದಲ್ಲಿ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, ಭಾರತೀಯ ಸೇನೆಯ ಸುಖೋಯ್ 30ಎಂಕೆಐ ಯುದ್ಧ ವಿಮಾನದ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಲಾಯಿತು.
ಸಂಪೂರ್ಣ ಸ್ವದೇಶಿ ನಿರ್ಮಿತವಾಗಿರುವ ಈ ಕ್ಷಿಪಣಿಯು ವಾಯುಯಿಂದ ಭೂಮಿಯ ಮೇಲಿನ ಗುರಿಗಳನ್ನು ಯಶಸ್ವಿಯಾಗಿ ತಲುಪಬಲ್ಲ, ಶತೃಪಾಳಯದ ರಾಡಾರ್ ವ್ಯವಸ್ಥೆಗಳನ್ನು, ಟ್ರಾಕಿಂಗ್ ಮತ್ತು ಕಮ್ಯುನಿಕೇಷನ್ (ಸಂವಹನ) ಸಿಸ್ಟಂಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ.
India achieves a significant milestone with successful flight test of LRSAM on board INS Chennai. The missile direcly hit a low flying aerial target.