ದಲಿತ ಯುವಕನ ಜೊತೆ ನನ್ನ ಮದುವೆಗೆ ನನ್ನ ತಂದೆಯೇ ಶತ್ರು: ಬಿಜೆಪಿ ಶಾಸಕನ ವಿರುದ್ಧ ಪುತ್ರಿ ಆರೋಪ

ದಲಿತ ಯುವಕನ ಜೊತೆ ಮದುವೆಯಾಗಿದ್ದಕ್ಕೆ ನನ್ನ ತಂದೆ ನಮ್ಮ ಹಿಂದೆ ಗೂಂಡಾಗಳನ್ನು ಬಿಟ್ಟಿದ್ದು ನಮಗೆ ಜೀವ ಬೆದರಿಕೆ ಇದೆ ಎಂದು ಬಿಜೆಪಿ ಶಾಸಕನ ಪುತ್ರಿ ಹೇಳಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಸಾಕ್ಷಿ-ರಾಜೇಶ್ ಮಿಶ್ರಾ
ಸಾಕ್ಷಿ-ರಾಜೇಶ್ ಮಿಶ್ರಾ
Updated on
ಲಖನೌ: ದಲಿತ ಯುವಕನ ಜೊತೆ ಮದುವೆಯಾಗಿದ್ದಕ್ಕೆ ನನ್ನ ತಂದೆ ನಮ್ಮ ಹಿಂದೆ ಗೂಂಡಾಗಳನ್ನು ಬಿಟ್ಟಿದ್ದು ನಮಗೆ ಜೀವ ಬೆದರಿಕೆ ಇದೆ ಎಂದು ಬಿಜೆಪಿ ಶಾಸಕನ ಪುತ್ರಿ ಹೇಳಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಉತ್ತರ ಪ್ರದೇಶ ಶಾಸಕ ರಾಜೇಶ್ ಮಿಶ್ರಾ ಪುತ್ರಿ 23 ವರ್ಷದ ಸಾಕ್ಷಿ ನಾನು ಪೋಷಕರಿಗೆ ಇಷ್ಟವಿಲ್ಲದೆ ಮದುವೆ ಮಾಡಿಕೊಂಡಿದ್ದೇನೆ. ಹೀಗಾಗಿ ಗೂಂಡಾಗಳು ನಮ್ಮ ಬೆನ್ನು ಬಿದ್ದಿದ್ದು ನಮ್ಮನ್ನು ಕೊಲೆ ಮಾಡುತ್ತಾರೆ ಎಂಬ ಆತಂಕವಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ವೈರಲ್ ಆಗಿದೆ. 
ವಿಡಿಯೋದಲ್ಲಿ ಸಾಕ್ಷಿ ಪಪ್ಪು ಭರ್ತೌಲ್ ಜಿ ಹಾಗೂ ವಿಕ್ಕಿ ಭರ್ತೌಲ್ ಜಿ, ದಯವಿಟ್ಟು ನೀವೂ ಬದುಕಿ. ನಮ್ಮನ್ನೂ ಶಾಂತಿಯಿಂದ ಬದುಕಲು ಬಿಡಿ. ನನಗೆ ನಿಜವಾಗಿಯೂ ಮದುವೆಯಾಗಿದೆ. ಫ್ಯಾಶನ್ ಗಾಗಿ ಸಿಂಧೂರ(ಕುಂಕುಮ) ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ.
ಇನ್ನು ತಮ್ಮ ವಿರುದ್ಧ ಮಗಳು ಮಾಡಿರುವ ಆರೋಪವನ್ನು ರಾಜೇಶ್ ಮಿಶ್ರಾ ತಳ್ಳಿ ಹಾಕಿದ್ದಾರೆ. ನನ್ನ ಮಗಳು ಸ್ವತಂತ್ರಳಾಗಿದ್ದಾಳೆ. ಅವಳು ತನ್ನ ತೀರ್ಮಾನವನ್ನು ತೆಗೆದುಕೊಳ್ಳಬಹುದು. ನಾನು ಯಾವುದೇ ರೀತಿಯ ಬೆದರಿಕೆ ಹಾಕಿಲ್ಲ. ಪುತ್ರಿಯನ್ನು ಕೊಲೆ ಮಾಡಲು ಬೆದರಿಕೆ ಹಾಕಲು ಯಾರನ್ನೂ ಕಳುಹಿಸಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com