ರಾಜಸ್ಥಾನ ಸಚಿವಾಲಯದಲ್ಲಿ ಸಭೆ ವೇಳೆ ಅಶ್ಲೀಲ ದೃಶ್ಯಾವಳಿ ಪ್ರಸಾರ, ಅಧಿಕಾರಿಗಳಿಗೆ ತೀವ್ರ ಮುಜುಗರ

ರಾಜಸ್ಥಾನದ ಸಚಿವಾಲಯದಲ್ಲಿ ಅಧಿಕಾರಿಗಳ ಸಭೆ ವೇಳೆ ಅಶ್ಲೀಲ ದೃಶ್ಯಾವಳಿ ಪ್ರಸಾರವಾದ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಜೈಪುರ: ರಾಜಸ್ಥಾನದ ಸಚಿವಾಲಯದಲ್ಲಿ ಅಧಿಕಾರಿಗಳ ಸಭೆ ವೇಳೆ ಅಶ್ಲೀಲ ದೃಶ್ಯಾವಳಿ ಪ್ರಸಾರವಾದ ಘಟನೆ ನಡೆದಿದೆ.
ಜೈಪುರದಲ್ಲಿರುವ ಸಚಿವಾಲಯದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ವೇಳೆ ತಾಂತ್ರಿಕ ದೋಷದಿಂದಾಗಿ ಅಶ್ಲೀಲ ದೃಶ್ಯಾವಳಿಗಳು ಪ್ರಸಾರವಾಗಿದೆ. ಈ ವೇಳೆ ಸಭೆಯಲ್ಲಿದ್ದ ಹಿರಿಯ ಅಧಿಕಾರಿಗಳು ತೀವ್ರ ಮುಜುಗರಕ್ಕೀಡಾಗಿದ್ದಾರೆ. ಹಿರಿಯ ಅಧಿಕಾರಿ ಮುಗ್ದಾ ಸಿಂಗ್ ಅವರು ಈ ಸಭೆಯ ನೇತೃತ್ವ ವಹಿಸಿದ್ದರು. 
ಈ ಕುರಿತು ಮಾತನಾಡಿರುವ ಮುಗ್ದಾ ಸಿಂಗ್ ಅವರು, ಸಭೆ ನಡೆಯುತ್ತಿದ್ದಾಗಲೇ ಅಶ್ಲೀಲ ದೃಶ್ಯಾವಳಿ ಪ್ರಸಾರವಾಯಿತು. ಕೂಡಲೇ ಎನ್ ಐಸಿ ನಿರ್ದೇಶಕರಿಗೆ ಮಾಹಿತಿ ನೀಡಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದರು.
ಇನ್ನು ಸಭೆಯಲ್ಲಿ ಇಲಾಖೆಯ ಸುಮಾರು 33 ಜಿಲ್ಲಾ ಸರಬರಾಜುದಾರರು ಹಾಗೂ ಇತರೆ ಅಥಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರದ ವಿವಿಧ ಯೋಜನೆಗ ಅನುಷ್ಠಾನದ ಕುರಿತ ಸಭೆಯಲ್ಲಿ ಚರ್ಚಿಸಲಾಗುತ್ತಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com