ಮಾಜಿ ಮಿಸ್ ಇಂಡಿಯಾಗೆ ರಸ್ತೆಯಲ್ಲಿ ಕಾಮುಕರಿಂದ ಲೈಂಗಿಕ ಕಿರುಕುಳ!

ಕೆಲ ಕೀಚಕರ ತಂಡ ನಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂದು ನನ್ನನ್ನು ಕಾರಿನಿಂದ ಹೊರಗೆಳೆದು ನನಗೆ ಲೈಂಗಿಕ ಕಿರಕುಳು ನೀಡಿದರು ಎಂದು ತಮಗಾ ಕರಾಳ...
ಉಶೋಶಿ ಸೇನ್ ಗುಪ್ತ
ಉಶೋಶಿ ಸೇನ್ ಗುಪ್ತ
Updated on: 
ಕೋಲ್ಕತ್ತಾ: ಕೆಲ ಕೀಚಕರ ತಂಡ ನಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂದು ನನ್ನನ್ನು ಕಾರಿನಿಂದ ಹೊರಗೆಳೆದು ನನಗೆ ಲೈಂಗಿಕ ಕಿರಕುಳು ನೀಡಿದರು ಎಂದು ತಮಗಾದ ಕರಾಳ ಅನುಭವವನ್ನು ಮಾಜಿ ಮಿಸ್ ಇಂಡಿಯಾ, ನಟಿ ಉಶೋಶಿ ಸೇನ್ ಗುಪ್ತಾ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ರಾತ್ರಿ 11.40ರ ಸುಮಾರಿಗೆ ಕೆಲಸದಿಂದ ವಾಪಸ್ಸಾಗುತ್ತಿದ್ದಾಗ ಬೈಕ್ ನಲ್ಲಿ ಬಂದ ಕೆಲ ಯುವಕ ಗುಂಪು ನಾನು ಪ್ರಯಾಣಿಸುತ್ತಿದ್ದ ಉಬರ್ ಕಾರು ಚಾಲಕನ ಬಳಿ ದುಡ್ಡು ಕೀಳಲು ಮುಂದಾದರು. ಈ ವೇಳೆ ನನ್ನು ಮೊಬೈಲ್ ನಿಂದ ದೃಶ್ಯಗಳನ್ನು ಸೆರೆ ಹಿಡಿದುಕೊಂಡೆ. ಇದಾದ ಬಳಿಕ ಅವರ ನಾನು ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದು ನನ್ನನ್ನು ಕಾರಿನಿಂದ ಹೊರಗೆಳೆದು ಹಿಂಸಿಸಿದರು. ಬಳಿಕ ನನ್ನ ಮೊಬೈಲ್ ಅನ್ನು ಹೊಡೆದು ಹಾಕಲು ಮುಂದಾದರು ಎಂದು ಬರೆದುಕೊಂಡಿದ್ದಾರೆ. 
ಇದಾದ ಬಳಿಕ ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನನ್ವಯ ಪೊಲೀಸರು ಏಳು ಯುವಕರನ್ನು ಬಂಧಿಸಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಉಶೋಶಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com