ಪಾಕ್ ಗೆ ತೆರಳುವ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸೇವೆ ನಾಳೆಯಿಂದ ಪುನಾರಂಭ: ರೈಲ್ವೆ ಇಲಾಖೆ

ದೆಹಲಿಯಿಂದ ಪಾಕಿಸ್ತಾನಕ್ಕೆ ತೆರಳುವ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸೇವೆ ಭಾನುವಾರದಿಂದ ಪುನಾರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿಯಿಂದ ಪಾಕಿಸ್ತಾನಕ್ಕೆ ತೆರಳುವ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸೇವೆ ಭಾನುವಾರದಿಂದ ಪುನಾರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ರೈಲು ಮಾ. 3ರಂದು ಭಾರತದಿಂದ ಹೊರಡಲಿದೆ ಮತ್ತು ಪಾಕಿಸ್ತಾನದ ಕಡೆಯಿಂದ ಸೋಮವಾರ ಲಾಹೋರ್‌ ನಿಂದ ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ - ಅಟ್ಟಾರಿ ನಡುವಣ ಅಟ್ಟಾರಿ ಸ್ಪೆಷಲ್ ಎಕ್ಸ್‌ ಪ್ರೆಸ್ ರೈಲು ಸೇವೆ ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ಕಳೆದ ಗುರುವಾರ ರೈಲ್ವೆ ಇಲಾಖೆ ತಿಳಿಸಿತ್ತು.
ಫೆ. 14ರ ಪುಲ್ವಾಮಾ ದಾಳಿಯ ನಂತರ ಸಂಜೋತಾ ಎಕ್ಸ್‌ ಪ್ರೆಸ್ ರೈಲಿನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದ ಹಿನ್ನಲೆಯಲ್ಲಿ ಈ ರೈಲು ಸೇವೆಯನ್ನು ರದ್ದುಪಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com