ಇಂಡಿಯನ್ ಗಾಲ್ಫ್ ಯೂನಿಯನ್ ಜೂನಿಯರ್ ನ್ಯಾಷನಲ್ ಚಾಂಪಿಯನ್‍ಶಿಪ್ ಗೆದ್ದ ಅರ್ಜುನ್ ಭಾಟಿ

ಕೋಲ್ಕತ್ತಾದಲ್ಲಿ ಇಂದು ಮುಕ್ತಾಯವಾದ ಇಂಡಿಯನ್ ಗಾಲ್ಫ್ ಯೂನಿಯನ್ ಕಿರಿಯರ  ರಾಷ್ಟ್ರೀಯ ಚಾಂಪಿಯನ್‍ಶಿಪ್-2019ರ ಪ್ರಶಸ್ತಿಯನ್ನು ಅರ್ಜುನ್ ಭಾಟಿ ಮುಡಿಗೇರಿಸಿಕೊಂಡಿದ್ದಾರೆ.
ಇಂಡಿಯನ್ ಗಾಲ್ಫ್ ಯೂನಿಯನ್ ಜೂನಿಯರ್ ನ್ಯಾಷನಲ್ ಚಾಂಪಿಯನ್‍ಶಿಪ್ ಗೆದ್ದ ಅರ್ಜುನ್ ಭಾಟಿ
ಇಂಡಿಯನ್ ಗಾಲ್ಫ್ ಯೂನಿಯನ್ ಜೂನಿಯರ್ ನ್ಯಾಷನಲ್ ಚಾಂಪಿಯನ್‍ಶಿಪ್ ಗೆದ್ದ ಅರ್ಜುನ್ ಭಾಟಿ

ನವದೆಹಲಿ: ಕೋಲ್ಕತ್ತಾದಲ್ಲಿ ಇಂದು ಮುಕ್ತಾಯವಾದ ಇಂಡಿಯನ್ ಗಾಲ್ಫ್ ಯೂನಿಯನ್ ಕಿರಿಯರ  ರಾಷ್ಟ್ರೀಯ ಚಾಂಪಿಯನ್‍ಶಿಪ್-2019ರ ಪ್ರಶಸ್ತಿಯನ್ನು ಅರ್ಜುನ್ ಭಾಟಿ ಮುಡಿಗೇರಿಸಿಕೊಂಡಿದ್ದಾರೆ.

ಇಂದು ಮುಕ್ತಾಯವಾದ ಮೂರು ದಿನಗಳ ಫೈನಲ್ ಸುತ್ತಿನಲ್ಲಿ ಅರ್ಜುನ್ ಭಾಟಿ ಅವರು ಬೆಂಗಳೂರಿನ ಆರ್ಯನ್ ಅವರನ್ನು ಮಣಿಸಿ ಚಾಂಪಿಯನ್ ಆದರು. ದೇಶದ ವಿವಿಧ ಭಾಗಗಳಿಂದ ಬಂದಿದ್ದ 100 ಗಾಲ್ಫ್ ಪಟುಗಳನ್ನು ಹಿಂದಿಕ್ಕಿ ಅರ್ಜುನ್ ಭಾಟಿ ಅಂತಿಮವಾಗಿ ಅಗ್ರ ಸ್ಥಾನವನ್ನು ಅಲಂಕರಿಸಿದರು. ಮೊದಲ ಸ್ಥಾನ ಪಡೆದ ಅರ್ಜುನ್ ಒಟ್ಟು 209 ಸ್ಟ್ರೋಕ್ಸ್ ಹೊಡೆದಿದ್ದರು. ಎರಡನೇ ಸ್ಥಾನ ಪಡೆದ ಬೆಂಗಳೂರಿನ ಆರ್ಯನ್ 213 ಸ್ಟ್ರೋಕ್ಸ್ ಹಾಗೂ ಮೂರನೇ ಸ್ಥಾನ ಪಡೆದ ಲಖ್ನೋದ ಅರಿನ್ 218 ಸ್ಟ್ರೋಕ್ಸ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com