

ಪ್ರವಾಹದ ಪರಿಸ್ಥಿತಿಗೆ ನಲುಗಿರುವ ಬಿಹಾರದಲ್ಲಿ 24 ಮಂದಿ ಸಾವನ್ನಪ್ಪಿದ್ದು, ನೆರವು ನೀಡುವಂತೆ ನಿತೀಶ್ ಕುಮಾರ್ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.
ಸತತ ಮೂರನೇ ದಿನವೂ ಸಹ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದಿದೆ. ಪಾಟ್ನಾದಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿದ್ದು ಮನೆಗಳು ಜಲಾವೃತಗೊಂಡಿವೆ.
ಜಲಾವೃತಗೊಂಡಿರುವ ಪ್ರದೇಶದಿಂದ ಜನರನ್ನು ತೆರವುಗೊಳಿಸುವುದಕ್ಕೆ ಬಿಹಾರ ಸರ್ಕಾರ ಭಾರತೀಯ ವಾಯುಪಡೆಯ ಸಹಕಾರ ಕೋರಿದೆ.
ಕೇಂದ್ರ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳವನ್ನು ನಿಯೋಜಿಸಿದ್ದು, ಹೆಚ್ಚುವರಿ ಸಿಬ್ಬಂದಿಗಳು ಶೀಘ್ರವೇ ಪ್ರವಾಹಪೀಡಿತ ಪ್ರದೇಶಕ್ಕೆ ತೆರಳಲಿದ್ದಾರೆ.