ಧಾರಾವಿ ಕೊಳಗೇರಿಯಲ್ಲಿ ಕೊರೋನಾದಿಂದ ವ್ಯಕ್ತಿ ಸಾವು: ಸಮೀಪದ 300 ಅಂಗಡಿಗಳಿಗೆ ಬೀಗ

ಕೊರೋನಾ ಸೋಂಕಿತ 46 ವರ್ಷದ ವ್ಯಕ್ತಿ ಮುಂಬಯಿಯ ಕೊಳಗೇರಿ ಪ್ರದೇಶದಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ಸುಮಾರು 300 ಅಂಗಡಿಗಳಿಗೆ ಸ್ಥಳೀಯ ಆಡಳಿತ ಬೀಗ ಜಡಿದಿದೆ.
ಧಾರಾವಿ ಸ್ಲಮ್
ಧಾರಾವಿ ಸ್ಲಮ್

ಮುಂಬಯಿ: ಕೊರೋನಾ ಸೋಂಕಿತ 46 ವರ್ಷದ ವ್ಯಕ್ತಿ ಮುಂಬಯಿಯ ಕೊಳಗೇರಿ ಪ್ರದೇಶದಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ಸುಮಾರು 300 ಅಂಗಡಿಗಳಿಗೆ ಸ್ಥಳೀಯ ಆಡಳಿತ ಬೀಗ ಜಡಿದಿದೆ.

ಮುಂಬಯಿಯ ಧಾರಾವಿ ಕೊಳಗೇರಿ ಪ್ರದೇಶ ಏಷ್ಯಾದಲ್ಸಿಯೇ ಅತಿ ದೊಡ್ಡ ಸ್ಲಂ ಎಂದು ಗುರುತಿಸಲ್ಪಟ್ಟಿದೆ. 

ಈ ಪ್ರದೇಶದಲ್ಲಿ ವಾಸವಿದ್ದ ವ್ಯಕ್ತಿ ಯಾವುದೇ ವಿದೇಶ ಪ್ರವಾಸ ಮಾಡಿರಲಿಲ್ಲ, ಆದರೂ ಆತ ಕೊರೋನಾ ಸೋಂಕಿನಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ 300 ಅಂಗಡಿ ಮುಂಗಟ್ಟುಗಳನ್ನು ಸೀಲ್ ಮಾಡಲಾಗಿದೆ.  ಸ್ಥಳೀಯರನ್ನು ಹೋಮ್ ಕ್ವಾರಂಟೈನ್ ನಲ್ಲಿಡವಾಗಿದೆ. 

ಮೃತ ವ್ಯಕ್ತಿಯನ್ನು  ನೋಡಲು ಜನರು ತಂಡೋಪತಂಡವಾಗಿ ಬರುತ್ತಿದ್ದರು, ಈಇ ವೇಳೆ ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com