ನರೇಂದ್ರ ದಾಬೋಲ್ಕರ್ ಪ್ರಕರಣದಂತೆ ಸುಶಾಂತ್ ತನಿಖೆ ಕೂಡ ಹಳ್ಳಿ ಹಿಡಿಲಿದೆ: ಶರದ್ ಪವಾರ್

 ಸಾಮಾಜಿಕ ಚಿಂತಕ ನರೇಂದ್ರ ದಾಭೋಲ್ಕರ್ ಹತ್ಯೆಯ‌ ತನಿಖೆಯಂತೆ ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣ ಕೂಡ ಸಿಬಿಐ ತನಿಖೆಯಾಗದೇ ಹಳ್ಳ ಹಿಡಿಯಲಿದೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ. 
ಶರದ್ ಪವಾರ್
ಶರದ್ ಪವಾರ್
Updated on: 

ಮುಂಬಯಿ: ಸಾಮಾಜಿಕ ಚಿಂತಕ ನರೇಂದ್ರ ದಾಭೋಲ್ಕರ್ ಹತ್ಯೆಯ‌ ತನಿಖೆಯಂತೆ ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣ ಕೂಡ ಸಿಬಿಐ ತನಿಖೆಯಾಗದೇ ಹಳ್ಳ ಹಿಡಿಯಲಿದೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ. 

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಸಿಬಿಐ 2014 ರಿಂದಲೂ ನರೇಂದ್ರ ದಾಭೋಲ್ಕರ್‌ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು ಅದು ಇನ್ನೂ ಪೂರ್ಣವಾಗಿಲ್ಲ. ಇದರಂತೆ ಸುಶಾಂತ್‌ ಸಿಂಗ್‌ ಪ್ರಕರಣದ ತನಿಖೆಯೂ ಕೂಡ ನಡೆಯುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಪವಾರ್‌ ಟ್ವೀಟ್‌ ಮಾಡಿದ್ದಾರೆ.

ನರೇಂದ್ರ ದಾಭೋಲ್ಕರ್‌ ಪ್ರಕರಣದ ತನಿಖೆಯಂತೇ ಇದು ಸಹ ತನಿಖೆಯಾಗುವುದಿಲ್ಲ ಎಂದು ಪವಾರ್‌ ಸಿಬಿಐ ಅನ್ನು ಉದ್ದೇಶಿಸಿ ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದಾರೆ. ಆದಾಗ್ಯೂ, ಮಹಾರಾಷ್ಟ್ರ ಸರ್ಕಾರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com