ರಿಯಾ ಸುಶಾಂತ್ ಗೆ ಡ್ರಗ್ಸ್ ನೀಡುತ್ತಿದ್ದ ಬಗ್ಗೆ ಅನುಮಾನವಿದೆ:  ವಕೀಲ ವಿಕಾಸ್ ಸಿಂಗ್ 

ಕೆಲ ಮಾದ್ಯಮಗಳಲ್ಲಿ ವರದಿಯಾದಂತೆ "ಡ್ರಗ್ಸ್ ಸಮಸ್ಯೆ" ನಿಜವಾಗಿದ್ದರೆ ಅದು ಗಂಭೀರ ವಿಷಯವಾಗಿದೆ ಎಂದು ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಪರ ವಕೀಲ ವಿಕಾಸ್ ಸಿಂಗ್ ಬುಧವಾರ ಹೇಳಿದ್ದಾರೆ  
ರಿಯಾ ಸುಶಾಂತ್ ಗೆ ಡ್ರಗ್ಸ್ ನೀಡುತ್ತಿದ್ದ ಬಗ್ಗೆ ಅನುಮಾನವಿದೆ:  ವಕೀಲ ವಿಕಾಸ್ ಸಿಂಗ್ 
Updated on: 

ಮುಂಬೈ: ಕೆಲ ಮಾದ್ಯಮಗಳಲ್ಲಿ ವರದಿಯಾದಂತೆ "ಡ್ರಗ್ಸ್ ಸಮಸ್ಯೆ" ನಿಜವಾಗಿದ್ದರೆ ಅದು ಗಂಭೀರ ವಿಷಯವಾಗಿದೆ ಎಂದು ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಪರ ವಕೀಲ ವಿಕಾಸ್ ಸಿಂಗ್ ಬುಧವಾರ ಹೇಳಿದ್ದಾರೆ  

"ನಿನ್ನೆ ಕೆಲವು ಮಾಧ್ಯಮಗಳಲ್ಲಿ ತೋರಿಸಿದಂತೆ ಈ ಡ್ರಗ್ಸ್ ವಿಷಯ ನಿಜವಾಗಿದ್ದರೆ ಖಂಡಿತವಾಗಿಯೂ ಇದು ತುಂಬಾ ಗಂಭೀರವಾದ ವಿಷಯವಾಗಿದೆ. ಕುಟುಂಬವು ಎಫ್‌ಐಆರ್ ನೊಂದಾಯಿಸಿದಾಗ ಸುಶಾಂತ್  ಡ್ರಗ್ಸ್ ಸೇವನೆ ಮಾಡುತ್ತಿದ್ದಾನೆ ಎಂಬ ಅಭಿಪ್ರಾಯವಿತ್ತು. ಆದರೆ ನಂತರ ನಾವು ಕಂಡುಕೊಂಡತೆ ಡ್ರಗ್ಸ್ ಕೆಲವು ಮನೋವೈದ್ಯರ ಸೂಚಿಸಿದ್ದಾಗಿತ್ತು ಎಂದು ತಿಳಿದಿತ್ತು"  ಸಿಂಗ್ ತಿಳಿಸಿದರು.

"ಆದರೆ ಈಗ ಬಹಿರಂಗವಾಗಿರುವ ವಿಚಾರ ಆಘಾತಕಾರಿ. ಅದು ನಿಜಕ್ಕೂ ನಿಷೇಧಿತ ಡ್ರಗ್ಸ್ ಆಗಿದ್ದು ಅದರಿಂದಲೇ ಆತ  ಆತ್ಮಹತ್ಯೆಗೆ ಮುಂದಾಗಿದ್ದಾನೆ ಎಂದಾದರೆ ಈ ವಿಷಯವು ಗಂಭೀರವಾದದ್ದು ಎಂದು ನಾನು ಭಾವಿಸುತ್ತೇನೆ  ಸಿಬಿಐನಿಂದ ಕೆಲವು ಪ್ರಮುಖ ವಿಚಾರಗಳು ಹೊರಬೀಳಲಿದೆ.

"ಸುಶಾಂತ್ ಅವರ ಇಚ್ಚೆಗೆ ವಿರುದ್ಧವಾಗಿ  ಅಥವಾ ಅವನ ಅರಿವಿಲ್ಲದೆ ಏನನ್ನಾದರೂ  ನೀಡಿದ್ದಾದರೆ ಅದಕ್ಕೆ ಆಕೆ (ರಿಯಾ ಚಕ್ರವರ್ತಿ) ಕಾರಣವೆ ಎನ್ನುವುದು ನಿಜವಾದ ಪ್ರಶ್ನೆಯಾಗಿದೆ" ಎಂದು ವಕೀಲರು ಹೇಳಿದರು.

ರಜಪೂತ್ ಸಾವಿನ ಬಗ್ಗೆ ಮನಿ ಲಾಂಡರಿಂಗ್ ದೃಷ್ಟಿಕೋನದಿಂದ ಪರಿಶೀಲಿಸುತ್ತಿರುವ ಮತ್ತು ದಿವಂಗತ ನಟನ ಗೆಳತಿ ರಿಯಾ ಚಕ್ರವರ್ತಿಯನ್ನು ಪ್ರಶ್ನಿಸಿರುವ ಜಾರಿ ನಿರ್ದೇಶನಾಲಯ (ಇಡಿ)  ತನಿಖೆಯ ನಡುವೆಯೇ ವಿಕಾಸ್ ಸಿಂಗ್ ಅವರ ಅಭಿಪ್ರಾಯ ನಟನ ಸಾವಿನ ಬಗ್ಗೆ ಇನ್ನಷ್ಟು ಅನುಮಾನ ಹುಟ್ಟುಹಾಕಿದೆ. ಸಿಬಿಐ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊಗೆ ಕೆಲವು ಸಾಕ್ಷ್ಯಗಳನ್ನುಸಹ ನೀಡಿದೆ.ನಿಷೇಧಿತ ಡ್ರಗ್ಸ್ ಅನ್ನು ನಟನಿಗೆ ನಿಇರುವ ಆರೋಪವನ್ನು ರಿಯಾ ಪರ ವಕೀಲರು ತಳ್ಳಿಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com