ಸಂಪೂರ್ಣ ಗುಣಮುಖರಾಗಿ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಗೃಹ ಸಚಿವ ಅಮಿತ್ ಶಾ 

ಕೊರೋನಾ ನಂತರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ಸಂಪೂರ್ಣ ಗುಣಮುಖರಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಅಮಿತ್ ಶಾ(ಸಂಗ್ರಹ ಚಿತ್ರ)
ಅಮಿತ್ ಶಾ(ಸಂಗ್ರಹ ಚಿತ್ರ)

ನವದೆಹಲಿ:ಕೊರೋನಾ ನಂತರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ಸಂಪೂರ್ಣ ಗುಣಮುಖರಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಕಳೆದ ಆಗಸ್ಟ್ 2ರಂದು ಕೊರೋನಾ ಪಾಸಿಟಿವ್ ಬಂದು 55 ವರ್ಷದ ಅಮಿತ್ ಶಾ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ನಂತರ ಗುಣಮುಖರಾಗಿ ಹೊರಬಂದಿದ್ದರು.ಆದರೆ ಮತ್ತೆ ಅವರಲ್ಲಿ ಆಯಾಸ ಮತ್ತು ಶರೀರದಲ್ಲಿ ನೋವು ಕಂಡುಬಂದಿದ್ದರಿಂದ ಆಗಸ್ಟ್ 18ರಂದು ಮತ್ತೆ ದಾಖಲಾದರು.

ಇದೀಗ ಸಂಪೂರ್ಣ ಗುಣಮುಖರಾಗಿ ಇಂದು ಬೆಳಗ್ಗೆ ಬಿಡುಗಡೆಗೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com