ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು-ಕಾಶ್ಮೀರ: ಅನಂತ್'ನಾಗ್ ಜಿಲ್ಲೆಯಲ್ಲಿ ಸೇನಾಪಡೆಗಳಿಂದ ಓರ್ವ ಉಗ್ರನ ಬಂಧನ

ಜಮ್ಮು ಮತ್ತು ಕಾಶ್ಮೀರದ ಅನಂತ್'ನಾಗ್ ಜಿಲ್ಲೆಯ ಗುಂದ್ ಬಾಬಾ ಖಲೀಲ್ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅನಂತ್ನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತ್'ನಾಗ್ ಜಿಲ್ಲೆಯ ಗುಂದ್ ಬಾಬಾ ಖಲೀಲ್ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಪುಲ್ವಾಮ ಜಿಲ್ಲೆಯ ನಿವಾಸಿಯಾಗಿರುವ ಜಹೀರ್ ಅಬ್ಬಾರ್ ಲೋನ್ ಬಂಧಿತ ಉಗ್ರನಾಗಿದ್ದಾನೆಂದು ತಿಳಿದುಬಂದಿದೆ. 

ಬಂಧಿತ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವನಾಗಿದ್ದಾನೆಂದು ಹೇಳಲಾಗುತ್ತಿದೆ. 

ಗುಂದ್ ಬಾಬಾ ಖಲೀಲ್ ಎಂಬ ಪ್ರದೇಶದಲ್ಲಿ ಅಡಗಿಕುಳಿತಿದ್ದ ಉಗ್ರ ಭದ್ರತಾ ಪಡೆಗಳ ಕಣ್ಣಿಗೆ ಬಿದ್ದಿದ್ದು, ಈ ವೇಳೆ ಸೇನಾಪಡೆ ಹಾಗೂ ಉಗ್ರನ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ, ಬಳಿಕ ಉಗ್ರನ ಮೇಲೆ ಗುಂಡು ಹಾರಿಸಿದ ಭದ್ರತಾಪಡೆಗಳು ಗಾಯಗೊಂಡ ಉಗ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ. 

Related Stories

No stories found.

Advertisement

X
Kannada Prabha
www.kannadaprabha.com