ಮೋದಿ ಆಟೋಗ್ರಾಫ್ ಕೇಳಿದ ಅಮಿತ್ ಶಾ ಪತ್ನಿ, ಪ್ರಧಾನಿ ಬರೆದ ಸಂದೇಶ ಏನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬರಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರೆ, ಅವರ ಆತ್ಮಿಯ ಸ್ನೇಹಿತ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪತ್ನಿ ಸೋನಾಲ್ ಬೆನ್ ಶಾ ಅವರು ಪ್ರಧಾನಿಯ ಆಟೋಗ್ರಾಫ್ ಪಡೆಯುವುದರಲ್ಲಿ ಬ್ಯುಸಿಯಾಗಿದ್ದರು.
ಆಟೋಗ್ರಾಫ್ ಪಡೆಯುತ್ತಿರುವ ಅಮಿತ್ ಶಾ ಪತ್ನಿ
ಆಟೋಗ್ರಾಫ್ ಪಡೆಯುತ್ತಿರುವ ಅಮಿತ್ ಶಾ ಪತ್ನಿ
Updated on: 

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬರಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರೆ, ಅವರ ಆತ್ಮಿಯ ಸ್ನೇಹಿತ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪತ್ನಿ ಸೋನಾಲ್ ಬೆನ್ ಶಾ ಅವರು ಪ್ರಧಾನಿಯ ಆಟೋಗ್ರಾಫ್ ಪಡೆಯುವುದರಲ್ಲಿ ಬ್ಯುಸಿಯಾಗಿದ್ದರು.

ಹೌದು, ಇಂದು ಅಹಮದಾಬಾದ್ ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಅಮಿತ್ ಶಾ ಅವರು ದಂಪತಿ ಸಮೇತ ಆಗಮಿಸಿದ್ದರು. ಈ ವೇಳೆ ಅಮಿತ್ ಶಾ ಪತ್ನಿ ಸೋನಾಲ್ ಬೆನ್ ಅವರು ಪ್ರಧಾನಿ ಮೋದಿಗೆ ಆಟೋಗ್ರಾಫ್ ಫ್ಲೀಸ್ ಎಂದಿದ್ದಾರೆ. 

ಪ್ರಧಾನಿ ಮೋದಿ ಅವರು ಸ್ನೇಹಿತನ ಪತ್ನಿಗೆ ಗುಜರಾತಿ ಭಾಷೆಯಲ್ಲಿಯೇ ಆಟೋಗ್ರಾಫ್ ನೀಡಿದ್ದು, 'ಹೆಮ್ಮೆಯ ಗುಜಾರಾತಿಗೆ ಸೆಲ್ಯೂಟ್' ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com