ಪೊಲೀಸರ ಸಮ್ಮುಖದಲ್ಲೇ ಸಿಎಎ ವಿರೋಧಿಗಳತ್ತ ಗುಂಡು ಹಾರಿಸಿದ ಯುವಕ: ಜಾಮಿಯಾ ವಿವಿ ವಿದ್ಯಾರ್ಥಿಗೆ ಗಾಯ, ವಿಡಿಯೋ!

ದೆಹಲಿಯ ಜಾಮಿಯಾ ಪ್ರದೇಶದಲ್ಲಿ ನಡೆಯುತ್ತಿದ್ದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಆಗುಂತಕನೊಬ್ಬ ಗುಂಡು ಹಾರಿಸಿದ್ದು ಪರಿಣಾಮ ಜಾಮಿಯಾ ವಿವಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾರೆ.
ನೈಜ್ಯ ಚಿತ್ರ
ನೈಜ್ಯ ಚಿತ್ರ
Updated on: 

ನವದೆಹಲಿ: ಹೊಸದಾಗಿ ತಿದ್ದುಪಡಿ ಮಾಡಿರುವ ಪೌರತ್ವ ಕಾನೂನು ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾಲಯದಿಂದ ರಾಜ್‍ಘಾಟ್‍ಗೆ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ವಿಶ್ವವಿದ್ಯಾಲಯ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಲಾಗಿದೆ. ಇದರ ಪರಿಣಾಮ ಜಾಮಿಯಾ ವಿವಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ.

ನಂತರ ಅಲ್ಲೇ ಇದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದ್ದಾರೆ. ಬಂಧಿತ ಆರೋಪಿ ಗೋಪಾಲ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೊವೊಂದರಲ್ಲಿ, ಆರೋಪಿ ಬೀದಿಗಳಲ್ಲಿ ಬಂದೂಕು ಹಿಡಿದು ‘ಯೆ ಲೋ ಆಜಾದಿ’(ಸ್ವಾತಂತ್ರ್ಯ ತೊಗಳ್ಳಿ)  ಎಂದು ಕೂಗುತ್ತಿರುವುದು ಕಂಡುಬಂದಿದೆ.

ಮಂಗಳವಾರ ಶಹೀನ್ ಬಾಗ್‍ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರತ್ತ ವ್ಯಕ್ತಿಯೊಬ್ಬ ಬಂದೂಕು ಗುರಿಯಾಗಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಇಂದು ಬಂಧಿತನಾದ ವ್ಯಕ್ತಿ ಪರವಾನಗಿ ಪಡೆದ ಬಂದೂಕು ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ನಂತರ, ಇಂದು, ಆ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com