ದೇಶ

ಕೋವಿಡ-19 ರಿಂದ ಚೇತರಿಸಿಕೊಂಡಿದ್ದ 93 ವರ್ಷದ ಹಿರಿಯ ಉರ್ದು ಕವಿ ಗುಲ್ಜಾರ್ ದೆಲ್ವಿ ನಿಧನ

ಕೋವಿಡ-19 ರಿಂದ ಚೇತರಿಸಿಕೊಂಡಿದ್ದ 93 ವರ್ಷದ ಹಿರಿಯ ಉರ್ದು ಕವಿ ಗುಲ್ಜಾರ್ ದೆಲ್ವಿ ನಿಧನ
ಉರ್ದು ಕವಿ ಗುಲ್ಜಾರ್
Published On :

ನವದೆಹಲಿ: ಹಿರಿಯ ಉರ್ದು ಕವಿ ಗುಲ್ಜಾರ್ ದೆಲ್ವಿ ಅವರು ಕೊವಿಡ್-19 ರಿಂದ ಚೇತರಿಸಿಕೊಂಡ ಕೆಲ ದಿನಗಳ ನಂತರ ನೋಯ್ಡಾದಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಅವರಿಗೆ 94 ವರ್ಷ ವಯಸ್ಸಾಗಿತ್ತು. ಕೊವಿಡ್‍ ಸೋಂಕು ದೃಢಪಟ್ಟ ದೆಲ್ವಿಯವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಚಿಕಿತ್ಸೆ ಪಡೆದ ನಂತರ ಅವರು ಮನೆಗೆ ಮರಳಿದ್ದರು.

ಕುಟುಂಬ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ, ಜೂ.06 ಹಾಗೂ ಜೂ.07 ರಂದು ನಡೆಸಿದ್ದ ಪರೀಕ್ಷೆಯಲ್ಲಿ ಗುಲ್ಜಾರ್ ಅವರಿಗೆ ಕೋವಿಡ್-19 ಸೋಂಕು ವರದಿ ನೆಗೆಟೀವ್ ಬಂದಿತ್ತು. ಈ ಕಾರಣದಿಂದಾಗಿಯೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಅವರಿಗೆ ಅನರೋಗ್ಯ ಮುಂದುವರೆದಿತ್ತು. ಮಧ್ಯಾಹ್ನ ಊಟ ಮಾಡಿದ್ದ ಗುಲ್ಜಾರ್ ಅವರು ವಿಶ್ರಾಂತಿಗಾಗಿ ಕೋಠಡಿಗೆ ತೆರಳಿದ್ದರು ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೃದಯ ಸ್ತಂಭನದಿಂದ ಗುಲ್ಜಾರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.