ಲಡಾಖ್: ಗಡಿ ಸಂಘರ್ಷದ ಮೂಲಕ ಚೀನಾ ತಡೆಯಲು ಬಯಸಿದ ಆಯಕಟ್ಟಿನ ಪ್ರಮುಖ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಿದ ಭಾರತ

ಚೀನಾದೊಂದಿಗಿನ ಗಡಿ ಸಂಘರ್ಷದ ಪ್ರಕ್ಷುಬ್ಧ ವಾತಾವರಣದ ನಡುವೆಯೂ ಭಾರತ ಈಶಾನ್ಯ ಲಡಾಖ್ ನಲ್ಲಿ ಆಯಕಟ್ಟಿನ, ಪ್ರಮುಖ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಪ್ರಮುಖ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಿದ ಭಾರತ
ಪ್ರಮುಖ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಿದ ಭಾರತ

ನವದೆಹಲಿ: ಚೀನಾದೊಂದಿಗಿನ ಗಡಿ ಸಂಘರ್ಷದ ಪ್ರಕ್ಷುಬ್ಧ ವಾತಾವರಣದ ನಡುವೆಯೂ ಭಾರತ ಈಶಾನ್ಯ ಲಡಾಖ್ ನಲ್ಲಿ ಆಯಕಟ್ಟಿನ, ಪ್ರಮುಖ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

ಈ ಮೂಲಕ ಚೀನಾ ಏನೇ ಕ್ಯಾತೆ ತೆಗೆಯಲು ಗಡಿ ಭಾಗದಲ್ಲಿ ಆಯಕಟ್ಟಿನ ಸ್ಥಳಗಳಿಗೆ ಸೇನೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಯನ್ನು ಭಾರತ ವಿಳಂಬ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಈಶಾನ್ಯ ಲಡಾಖ್ ನಲ್ಲಿರುವ ಷ್ಯೋಕ್ ನದಿಗೆ ಈ ಸೇತುವೆ ನಿರ್ಮಾಣ ಮಾಡಲಾಗಿದ್ದು, ಚೀನಾ ಸೈನಿಕರೊಂದಿಗಿನ ಸಂಘರ್ಷದ ನಡುವೆಯೇ ಗುರುವಾರದಂದು ಕಾಮಗಾರಿ ಪೂರ್ಣಗೊಂಡಿದೆ. 

6 ಮೀಟರ್ ನಷ್ಟಿರುವ ಈ ಸೇತುವೆ ಷ್ಯೋಕ್- ಗಾಲ್ವನ್ ನದಿಗಳ ಸಂಗಮದಿಂದ ಪೂರ್ವಕ್ಕೆ 4 ಕಿಮೀ ನಷ್ಟು ದೂರವಿದ್ದು,  ಪರ್ವತ ಪ್ರದೇಶದಿಂದ ಷ್ಯೋಕ್-ದೌಲತ್ ಬೇಗ್ ಓಲ್ಡಿ ರಸ್ತೆಗೆ ಸಂಪರ್ಕ ಕಲ್ಪಿಸಲಿದ್ದು ಭಾರತೀಯ ಪಡೆಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com